ಸನ್ಮಾರ್ಗ ವಾರ್ತೆ
ಕಾಬೂಲ್: ಪಶ್ಚಿಮ ಕಾಬೂಲಿನಲ್ಲಿ ಹಸಿವಿನಿಂದಾಗಿ ಎಂಟು ಮಕ್ಕಳ ಮೃತಪಟ್ಟಿದ್ದಾರೆ ಎಂದು ರಷ್ಯನ್ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿಮಾಡಿತು. ಮಾಜಿ ಪಾರ್ಲಿಮೆಂಟು ಸದಸ್ಯ ಹಾಜಿ ಮುಹಮ್ಮದ್ ಮುಹಕಕ್ ಫೇಸ್‍ಬುಕ್‍ನಲ್ಲಿ ಈ ವಿಷಯ ತಿಳಿಸಿದ್ದಾರೆ. ಹಝಾರ ವಿಭಾಗದ ಮಕ್ಕಳು ಮೃತಪಟ್ಟವರಲ್ಲಿ ಅಧಿಕ. ಅಧಿಕಾರಕ್ಕೆ ಬಂದ ಮೇಲೆ ಪಶ್ಚಿಮ ಕಾಬೂಲ್‍ಗೆ ಮೂಲ ಸೌಕರ್ಯ ತಲುಪಿಸಲು ತಾಲಿಬಾನ್ ಏನೂ ಮಾಡಿಲ್ಲ ಮಹಕಕ್ ಹೇಳಿದರು.
ಇದೇ ವೇಳೆ ಹಸಿವು ನಿವಾರಣೆಗಾಗಿ ಉದ್ಯೋಗಕ್ಕೆ ಬದಲಾಗಿ ಗೋಧಿ ಯೋಜನೆ ಜಾರಿಗೆ ತರುವುದಾಗಿ ತಾಲಿಬಾನ್ ಹೇಳಿದೆ. ಅಫ್ಘಾನಿನ ಪ್ರಧಾನ ನಗರಗಳಲ್ಲಿ ಈ ಯೋಜನೆ ಜಾರಿಗೆ ತರಲು ತಾಲಿಬಾನ್ ಬಯಸಿದೆ. 40,000 ಪುರುಷರನ್ನು ಯೋಜನೆಯಲ್ಲಿ ಸೇರಿಸಲಾಗುವುದು ಎಂದು ತಾಲಿಬಾನ್ ವಕ್ತಾರ ಸಬೀವುಲ್ಲಾ ಮುಜಾಹಿದ್ ತಿಳಿಸಿದರು.












