ಮೇ 24ಕ್ಕೆ ಮೋದಿ ಸಿನೆಮಾ ಬಿಡುಗಡೆ

0
489

ಹೊಸದಿಲ್ಲಿ,ಮೇ 3: ಪ್ರಧಾನಿ ನರೇಂದ್ರ ಮೋದಿಯ ಜೀವನ ಚರಿತ್ರೆ ವಿವರಿಸುವ ಸಿನೆಮಾ ಪಿ.ಎಂ ನರೇಂದ್ರ ಮೋದಿ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಮರು ದಿವಸ ಮೇ 24ಕ್ಕೆ ಸಿನೆಮಾ ಬಿಡುಗಡೆಗೊಳ್ಳಲಿದೆ. ಎಪ್ರಿಲ್ 11ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯ ದಿನಾಂಕ ನಿಗದಿಯಾಗಿತ್ತು. ಆದರೆ ಚುನಾವಣಾ ಆಯೋಗ ಸಿನೆಮಾ ಬಿಡುಗಡೆಗೆ ನಿಷೇಧ ಹೇರಿತ್ತು. ಚುನಾವಣಾ ಆಯೋಗದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟು ನಿರಾಕರಿಸಿತ್ತು. ನಿಷೇಧ ಪ್ರಕಟವಾಗುವುದರೊಂದಿಗೆ ಸಿನೆಮಾದ ಟ್ರೈಲರ್ ಯೂ ಟ್ಯೂಬ್‍ನಿಂದ ಹಿಂಪಡೆದುಕೊಳ್ಳಲಾಗಿತ್ತು. ಬಾಲಿವುಡ್ ನಟ ವಿವೇಕ್ ಒಬೆರಾಯ್ ನರೇಂದ್ರ ಮೋದಿಯ ಪಾತ್ರ ನಿರ್ವಹಿಸಿದ್ದಾರೆ.