ಹೆಚ್ಚಿದ ಗಡಿ ಆತಂಕ: ಹೆಲಿಪ್ಯಾಡ್ ನಿರ್ಮಾಣದಲ್ಲಿ ಚೀನಾ!

0
410

ಸನ್ಮಾರ್ಗ ವಾರ್ತೆ

ಲಡಾಕ್,ಜೂ.27: ಭಾರತ-ಚೀನ ಗಡಿಯ ಪಾಂಗೊಂಗ್ ಸರೋವರದ ಬಳಿ ಚೀನಾದಿಂದ ಹೊಸ ಹೆಲಿಪ್ಯಾಡ್ ನಿರ್ಮಾಣವಾಗುತ್ತಿದೆ ಎಂದು ವರದಿಯಾಗಿದ್ದು, ತಟಾಕದಲ್ಲಿ ಉತ್ತರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಲವು ಸೈನಿಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ಇದರೊಂದಿಗೆ ಗಡಿ ನಿಯಂತ್ರಣ ರೇಖೆ ಎಲ್‍ಎಸಿಯಲ್ಲಿ ಆತಂಕ ದುಪ್ಪಟ್ಟಾಗಿದ್ದು, ಫಿಂಗರ್4, ಫಿಂಗರ್5 ನಡುವೆಯಲ್ಲಿರುವ ಪ್ರದೇಶ ಇದು. ಫಿಂಗರ್ ಪಾಯಿಂಟ್ 3ಯಲ್ಲಿ ಭಾರತ ಸೈನಿಕ ಕ್ಯಾಂಪ್‍ಗಳು ಇವೆ. ಈ ಹಿಂದೆ ಈ ಸ್ಥಳದಲ್ಲಿ ಚೀನಾ ಸೈನಿಕ ಶಕ್ತಿಯನ್ನು ಹೆಚ್ಚಿಸಿತ್ತು. ಟ್ಯಾಂಕ್‍ಗಳನ್ನು ಸೈನಿಕ ವಾಹನಗಳನ್ನು ನಿಯೋಜಿಸಿತ್ತು ಎಂದು ವರದಿಯಾಗಿತ್ತು.

ಹಿಂದೆ ಸರಿಯುವುದಕ್ಕಾಗಲಿ, ಎಪ್ರಿಲ್‍ನ ಪೂರ್ವ ಸ್ಥಿತಿಗೆ ಹೋಗಲು ಚೀನಕ್ಕೆ ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸುವ ಕ್ರಮ ಇದು ಹಿರಿಯ ಸೈನಿಕ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಚೀನ ಕಮಾಂಡರ್ ಮಟ್ಟದ ಚರ್ಚೆಗಳು ವಿಫಲಗೊಳ್ಳುವ ರೀತಿಯಲ್ಲಿ ಚೀನಾ ವರ್ತಿಸುತ್ತಿದೆ ಎನ್ನಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.