ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.27: ದೇಶದಲ್ಲಿ ಪುನಃ ತೈಲ ದರದಲ್ಲಿ ಹೆಚ್ಚಳವಾಗಿದ್ದು, ಪೆಟ್ರೋಲ್ಗೆ 25 ಪೈಸೆ ಮತ್ತು ಡೀಸೆಲ್ 21 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ದಿಲ್ಲಿಯಲ್ಲಿ ಪೆಟ್ರೋಲ್ ಲೀಟರ್ಗೆ 80.93 ರೂ. ಹಾಗೂ ಡೀಸೆಲ್ಗೆ 80.40 ರೂಪಾಯಿಗೆ ಏರಿಕೆಯಾಗಿದೆ. ನಿರಂತರ 21 ದಿವಸ ತೈಲ ದರದಲ್ಲಿ ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಡಿಮೆಯಾಗಿಯೂ ದೇಶದ ಇಂಧನ ಕಂಪೆನಿಗಳು ಇಂಧನ ದರ ಹೆಚ್ಚುವುದು ಮುಂದುವರೆಸಿವೆ. 21 ದಿವಸದಲ್ಲಿ ಪೆಟ್ರೋಲಿಗೆ 9.12 ರೂಪಾಯಿ ಡೀಸೆಲ್ಗೆ 11.011ರೂಪಾಯಿ ಹೆಚ್ಚಳವಾಗಿದೆ. ವ್ಯಾಟ್ ಸೇರಿದಾಗ ರಾಜ್ಯಗಳಲ್ಲಿ ಈ ದರದಲ್ಲಿ ವ್ಯತ್ಯಾಸವಾಗುತ್ತದೆ.
ಕೊರೋನ ಮಹಾಮಾರಿಯಿಂದ ನಲುಗಿದ ಜನರಿಗೆ ದುಪ್ಪಟ್ಟು ಹೊಡೆತವಿದು. ಪ್ರತಿಪಕ್ಷಗಳ ಪ್ರತಿಭಟನೆಗೆ ಸೊಪ್ಪು ಹಾಕದೆ ಕೇಂದ್ರ ಸರಕಾರ ಬೆಲೆ ಹೆಚ್ಚಳವನ್ನು ಮುಂದುವರಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ .












