ಭೂತಾನ್ ಗಡಿಯಲ್ಲಿ ಚೀನಾ ಅತಿಕ್ರಮಣ: ಒಂದೇ ವರ್ಷದಲ್ಲಿ 4 ಗ್ರಾಮಗಳ ನಿರ್ಮಾಣ!

0
391

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭೂತಾನ್ ಗಡಿಯಲ್ಲಿ ಚೀನದ ಅತಿಕ್ರಮಣದ ಕುರಿತ ಉಪಗ್ರಹ ಚಿತ್ರಗಳು ಹೊರಬಂದಿವೆ. 10 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಚೀನ ಹೊಸ ಗ್ರಾಮಗಳನ್ನು ನಿರ್ಮಿಸಿದೆ. ಸಂಶೋಧಕರು ಹೊರ ಬಿಟ್ಟ ಚಿತ್ರಗಳನ್ನು ಎನ್‌ಡಿಟಿವಿ ವರದಿ ಮಾಡಿದೆ.

2017ರಲ್ಲಿ ಭಾರತ ಚೀನ ಘರ್ಷಣೆ ನಡೆದ ದೊಕ್ಲಾಮ್ ಹತ್ತಿರ ಈ ಸ್ಥಳವಿದೆ. ಘರ್ಷಣೆಯ ನಂತರ ಚೀನ ಇಲ್ಲಿಗೆ ರಸ್ತೆ ಮಾಡಲು ತೊಡಗಿತ್ತು. ಇದು ಭಾರತ ಚೀನ ವಿವಾದಕ್ಕೆ ಆಸ್ಪದ ಕೊಟ್ಟಿತು.

ಭೂತಾನಿನಲ್ಲಿ ಚೀನದ ಗ್ರಾಮ ನಿರ್ಮಾಣ ಭಾರತಕ್ಕೆ ಆತಂಕಕ್ಕೆ ದಾರಿ ಮಾಡಿತು. 2020 ಮತ್ತು 2021 ನಡುವೆ ಈ ಗ್ರಾಮಗಳು ನಿರ್ಮಾಣ ಕಾರ್ಯ ಆಯಿತೆನ್ನಲಾಗುತ್ತಿದೆ. ಒಂದು ವರ್ಷದಲ್ಲಿ ನಾಲ್ಕು ಗ್ರಾಮಗಳನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜಾಗತಿಕ ಸಂಶೋಧಕ @detresfa_ ಎಂಬ ಟ್ವಿಟರ್ ಖಾತೆಯಲ್ಲಿ ಹೊಸ ಉಪಗ್ರಹ ಚಿತ್ರಗಳಿವೆ. ಭೂತಾನ್ ಗಡಿಯಲ್ಲಿ ಚೀನಾ ನಡೆಸಿದ ಅತಿಕ್ರಮಣವನ್ನು ಬಹಿರಂಗಪಡಿಸುತ್ತಿದೆ.

ಭೂತಾನ್-ಚೀನ ನಡುವಿನ ವಿವಾದಿತ ಸ್ಥಳದಲ್ಲಿ 2020-21ರ ಅವಧಿಯಲ್ಲಿ ಈ ನಿರ್ಮಾಣ ಕಾರ್ಯ ನಡೆದಿದೆ. 100 ಕಿಮೀ ವಿಸ್ತಾರದಲ್ಲಿ ಒಂದಕ್ಕಿಂತ ಹೆಚ್ಚು ಗ್ರಾಮಗಳು ವ್ಯಾಪಿಸಿವೆ.