ಸನ್ಮಾರ್ಗ ವಾರ್ತೆ
ಬೀಜಿಂಗ್,ಅ.2: “ಯಾವ ಶಕ್ತಿಯಿಂದಲೂ ಚೀನದ ಪ್ರಗತಿಯನ್ನಹ ತಡೆಯಲು ಸಾಧ್ಯವಿಲ್ಲ” ಎಂದು ಅಧ್ಯಕ್ಷ ಶಿ ಜಿನ್ಪಿಂಗ್ ಹೇಳಿದರು. ಹಾಂಕಾಂಗ್, ಮಕಾವ್ನ ಶ್ರೀಮಂತಿಕೆ ಸ್ಥಿರತೆಯನ್ನು ನೆಲೆ ನಿಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ಚೀನದ ಕಮ್ಯೂನಿಸ್ಟ್ ಸರಕಾರ ಬಂದು ಎಪ್ಪತ್ತು ವರ್ಷ ಆಗಿದೆ. ಈ ಸಂದರ್ಭದಲ್ಲಿ ಅವರು ಟಿಯೊನ್ಮಾನ್ ಸ್ಕ್ವೇರ್ನಲ್ಲಿ ದೇಶವನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
1949ರಲ್ಲಿ ಕಮ್ಯುನಿಸ್ಟ್ ಸ್ಥಾಪಕ ನಾಯಕ ಮಾವೊ ಸೆ ತ್ಸುಂಗ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ ಘೋಷಿಸಿದರು. ಅದೇ ವೇದಿಕೆಯಲ್ಲಿ ಎಪ್ಪತ್ತು ವರ್ಷದ ಬಳಿಕ ಶಿ ಭಾಷಣ ಮಾಡಿದರು. ಒಂದು ಲಕ್ಷ ಸೈನಿಕರು ಪರೇಡ್ನಲ್ಲಿ ಭಾಗವಹಿಸಿದ್ದಾರೆ. ಟ್ಯಾಂಕ್ ಕವಚಿತ ವಾಹನಗಳು ಸೂಪರ್ಸಾನಿಕ್ ಡ್ರೋನ್ಗಳನ್ನು ಚೀನ ಪ್ರದರ್ಶಿಸಿತು.160 ಸೈನಿಕ ವಿಮಾನಗಳು 580 ಸೈನಿಕ ಉಪಕರಣಗಳು 59 ಸೈನಿಕ ಬ್ಯಾಂಡುಗಳು ಚೀನದ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿವೆ.
ಆದರೆ, ಹಾಕಾಂಗ್ ಚೀನದ ರಾಷ್ಟ್ರದಿನಾಚರಣೆಯನ್ನು ದುಃಖ ದಿನಾಚಣೆಯಾಗಿ ಆಚರಿಸಿದೆ. ಸರಕಾರದ ಆದೇಶ ಮೀರ ಹಾಕಾಂಗ್ ಪ್ರಜಾಪ್ರಭುತ್ವವಾದಿಗಳು ನಡೆಸಿದ ಹೋರಾಟ ರೂಢಿಯಂತೆ ಘರ್ಷಣೆಯಲ್ಲಿ ಮುಗಿದಿದೆ. ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗಿಸಿದ್ದಾರೆ. ಅಮೆರಿಕವನ್ನು ಸುಟ್ಟು ಕರಕಲು ಮಾಡುವ ಮಿಸೈಲ್ಗಳು ತಮ್ಮಲ್ಲಿವೆ ಎಂದು ಚೀನ ಹೇಳಿಕೊಂಡಿದೆ. ಸೇನಾಶಕ್ತಿಯಲ್ಲಿ ಅಮೆರಿಕಕ್ಕಿಂತ ಸ್ವಲ್ಪ ಕೆಳಗೆ ಇದೆ. ಅರ್ಧ ಗಂಟೆಯಲ್ಲಿ ಅಮೆರಿಕವನ್ನು ಸರ್ವನಾಶಮಾಡುವ ಭೂಖಂಡಾಂತರ ಕ್ಷಿಪಣಿ ಬಾಲಸ್ಟಿಕ್ ಮಿಸೈಲ್ ತಮ್ಮ ಬಳಿ ಇದೆ ಎಂದು ರಾಷ್ಟ್ರ ದಿನಾಚರಣೆಯ ವೇಳೆ ಚೀನ ಬಹಿರಂಗಪಡಿಸಿತು.












