ಮಹಾತ್ಮ ಗಾಂಧಿಯ ಹೆಸರನ್ನು ದುರ್ಬಳಕೆ ಮಾಡಲು ಶ್ರಮಿಸುವವರು ಯಶಸ್ವಿಯಾಗುವುದಿಲ್ಲ- ಸೋನಿಯಾ ಗಾಂಧಿ

0
633

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ2: ಮಹಾತ್ಮ ಗಾಂಧಿಯ ಹೆಸರು ದುರ್ಬಳಕೆ ಮಾಡಲು ಶ್ರಮಿಸುವವರು ಯಶಸ್ವಿಯಾಗುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದರು. ಗಾಂಧಿಯ ಮಾತುಗಳನ್ನು ಉದ್ಧರಿಸುವುದು ಸುಲಭ. ಆದರೆ ಅವರನ್ನು ಅನುಸರಿಸುವುದು ಕಷ್ಟವಿದೆ ಎಂದು ಸೋನಿಯ ಹೇಳಿದರು. ಗಾಂಧಿ ಜಯಂತಿ ದಿನದಲ್ಲಿ ರಾಜ್‍ಘಾಟ್‍ನಲ್ಲಿ ಸೋನಿಯಾ ಗಾಂಧಿಯವರು ಮಾತನಾಡಿದರು.

ಮಹಾತ್ಮರ ಹೆಸರು ದುರ್ಬಳಕೆಗೆ ಯತ್ನಿಸುವವರು ಯಶಸ್ವಿಯಾಗಲಾರರು. ಭಾರತದ ಪಂಚಾಂಗ ಗಾಂಧಿ ತತ್ವದಲ್ಲಿದೆ. ಕೆಲವರು ಗಾಂಧಿಯನ್ನು ದೂರವಿಟ್ಟು ಆರೆಸ್ಸೆಸ್ಸನ್ನು ಭಾರತದ ಚಿಹ್ನೆಯನ್ನಾಗಿಸಲು ಶ್ರಮಿಸುತ್ತಿದ್ದಾರೆ. ಅಸತ್ಯದ ರಾಜಕೀಯ ಚಟುವಟಕೆ ಮಾಡುವವರು, ಸರ್ವಾಧಿಕಾರಕ್ಕೆ ಯತ್ನಿಸುವವರು ಯಾವತ್ತೂ ಗಾಂಧಿಯನ್ನು ಮನದಟ್ಟು ಮಾಡಿಕೊಳ್ಳಲಾರರು ಎಂದು ಸೋನಿಯಾ ಹೇಳಿದರು.

ಗಾಂಧಿ ಪ್ರೀತಿಗಾಗಿದ್ದರು. ದ್ವೇಷಕ್ಕಾಗಿರಲಿಲ್ಲ. ಪ್ರಜಾಪ್ರಭುತ್ವಕ್ಕಾಗಿ ಗಾಂಧಿ ಶ್ರಮಿಸಿದರು. ಸರ್ವಾಧಿಕಾರಕ್ಕಾಗಿ ಅಲ್ಲ. ಕಾಂಗ್ರೆಸ್ ಮಾತ್ರ ಗಾಂಧಿಯ ಪಥ ಅನುಸರಿಸುತ್ತಿದೆ. ಅದು ಇನ್ನು ಕೂಡ ಮುಂದುವರಿಸಲಿದೆ ಎಂದು ಹೇಳಿದರು. ಇದಕ್ಕಿಂತ ಮೊದಲು ಪಾರ್ಲಿಮೆಂಟ್ ಸೆಂಟ್ರಲ್ ಹಾಲ್‍ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿಯೂ ಸೋನಿಯಾ ಗೌರವಸಲ್ಲಿಸಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ಹಿರಿಯ ನಾಯಕ ಎಲ್‍ಕೆ ಅಡ್ವಾಣಿ, ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಗೌರವ ಸಲ್ಲಿಸಿದರು. ಗಾಂಧಿ ಜಯಂತಿ ದಿನದಲ್ಲಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ.