ಪಾಕಿಸ್ತಾನ ಶೀಘ್ರವೇ ಕಪ್ಪುಪಟ್ಟಿಗೆ- ರಾಜ್‍ನಾಥ್ ಸಿಂಗ್

0
553

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.2: ಭಾರತದಲ್ಲಿ ಹಲವು ದಾಳಿಗಳನ್ನು ನಡೆಸಿದ ಭಯೋತ್ಪಾದನಾ ಸಂಘಟನೆಗಳಿಗೆ ಧನ ಸಹಾಯ ನೀಡಿದ ಹೆಸರಿನಲ್ಲಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಏಜೆನ್ಸಿ ಫಿನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಐಟಿಎಫ್) ಯಾವಾಗ ಬೇಕಿದ್ದರೂ ಕಪ್ಪುಪಟ್ಟಿಗೆ ಸೇರಿಸಬಹುದು ಎಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ. ರಕ್ಷಣಾ ಇಲಾಖೆ ಖಾತೆ ದಿನ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.

ಏಷ್ಯಾ ಪೆಸಿಫಿಕ್ ವಲಯದ ವಿತ್ತ ಸಂಸ್ಥೆ ಎಫ್‍ಐಟಿಎಫ್ ಆಗಿದೆ. ಮಿತಿ ಮೀರಿದ ಸೈನಿಕೀಕರಣ ಮತ್ತು ತಪ್ಪು ನೀತಿ ಪಾಕಿಸ್ತಾನದ ಆರ್ಥಿಕ ಪ್ರಗತಿಗೆ ಅಡ್ಡಿಯಾಗಿದೆ ಎಂದು ಅವರು ಹೇಳಿದರು. ನ್ಯೂಯಾರ್ಕಿನ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಭಾಗವಹಿಸಿದ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೌದಿ ಅರೇಬಿಯದ ವಿಮಾನದಲ್ಲಿ ಮರಳಿದ್ದಾರೆ. ಈ ವಿಮಾನ ಹಾರಿದ ಕೂಡಲೇ ತಾಂತ್ರಿಕ ತೊಂದರೆ ಕಾಣಿಸಿಕೊಂಡದ್ದರಿಂದ ಪನಃ ನ್ಯೂಯಾರ್ಕಿನಲ್ಲಿ ಇಳಿಸಲಾಯಿತು. ಪ್ರಧಾನಿ ಪ್ರಯಾಣಕ್ಕೂ ಸ್ವಂತ ವಿಮಾನ ಏರ್ಪಾಡು ಮಾಡಲು ಪಾಕಿಸ್ತಾನದಿಂದಾಗಿಲ್ಲ ಎಂದು ರಾಜ್‍ನಾಥ್ ಸಿಂಗ್ ಹೇಳಿದರು.