ಐಬಿಯ ಸಹಾಯದೊಂದಿಗೆ ದಾವೂದ್‍ನನ್ನು ಕೊಲೆ ಮಾಡಲು ಛೋಟಾ ರಾಜನ್ ಯೋಜನೆ ರೂಪಿಸಿದ್ದ

0
554

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 24: ಭಾರತದ ಇಂಟಲಿಜೆನ್ಸ್ ಬ್ಯೂರೊದ ಸಹಾಯದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹೀಂ ಹತ್ಯೆಗೆ ಕರಾಚಿಯಲ್ಲಿ ಛೋಟಾ ರಾಜನ್ ಯತ್ನಿಸಿದ್ದ ಎಂದು ಮಾಜಿ ಡಿ ಕಂಪೆನಿಯ ಸದಸ್ಯ ಇಜಾಝ್ ಲಕ್‍ಡವಾಲ ಹೇಳಿದ್ದಾನೆ. ಜನವರಿ ಎಂಟರಂದು ಬಂಧಿಸಲಾದ ಲಕ್‍ಡವಾಲ ವಿಚಾರಣೆಯ ವೇಳೆ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗೆ ಇದನ್ನು ಬಹಿರಂಗಪಡಿಸಿದ್ದಾರೆ. ವಿಕ್ಕಿ ಮಲ್‍ಹೋತ್ರ, ಫರೀದ್ ತನಾಶರ ನೇತೃತ್ವದ ತಂಡದಲ್ಲಿ ತಾನೂ ಇದ್ದೆ ಎಂದು ಲಕ್‍ಡವಾಲ ತಿಳಿಸಿದ್ದಾನೆ. 1998ರಲ್ಲಿ ಮಗಳು ಮರಿಯಂ ನಿಧನಾನಂತರದ ಕಾರ್ಯಕ್ರಮಕ್ಕಾಗಿ ದಾವೂದ್ ಕರಾಚಿಯ ದರ್ಗಾಕ್ಕೆ ಬರುವಾಗ ಗತಿಕಾಣಿಸುವುದು ಉದ್ದೇಶವಾಗಿತ್ತು. ಆದರೆ, ನೇಪಾಲ ಪಾರ್ಲಿಮೆಂಟ್ ಸದಸ್ಯ ಮಿರ್ಝ ದಿಲ್‍ಶಾದ್ ಬೇಗ್, ಛೋಟಾ ರಾಜನ್ ದಾಳಿಯನ್ನು ದಾವೂದ್‍ಗೆ ಸೋರಿಕೆ ಮಾಡಿದ್ದರು. ಅದರೊಂದಿಗೆ ಪ್ರಯತ್ನ ವಿಫಲವಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಮಿರ್ಝ ದಿಲ್‍ಶಾದ್ ಬೇಗ್‍ರನ್ನು ರಾಜನ್ ತಂಡ ಕೊಲೆ ಮಾಡಿತ್ತು.

ಆರಂಭದಲ್ಲಿ ಲಕ್‍ಡವಾಲ ದಾವೂದ್ ಜೊತೆಗಿದ್ದನು. ನಂತರ ಛೋಟರಾಜನ್ ಗ್ಯಾಂಗ್ ಸೇರಿದ್ದನು. ನಂತರ ತನ್ನದೆ ತಂಡ ರೂಪಿಸಿದ್ದನು. 2002ಲ್ಲಿ ದಾವೂದ್ ನ ಡಿ ಕಂಪೆನಿ ಛೋಟಾ ರಾಜನ್ ಮೇಲೆ ದಾಳಿ ನಡೆಸುವ ವಿವರ ಮುಂಬೈ ಪೊಲೀಸರಿಗೆ ಸೋರಿಕೆ ಮಾಡಿದ್ದೂ ಲಕ್‍ಡವಾಲನೇ.

ಪಾಸ್ಪೋರ್ಟ್ ಕೇಸಿನಲ್ಲಿ ಪುತ್ರನ ಬಂಧನವಾದ ಬಳಿಕ ಲಕ್‍ಡವಾಲ ಪಾಟ್ನ ಪೊಲೀಸರಿಗೆ ಶರಣಾಗಿದ್ದ.