ವೆಲ್ಲಿಂಗ್ಟನ್, ಜೂ. 19: ಕ್ರೈಸ್ಟ್ ಚರ್ಚ್ನಲ್ಲಿ 51 ಮಂದಿಯನ್ನು ಗುಂಡು ಹಾರಿಸಿದ ದೃಶ್ಯವನ್ನು ಪ್ರಚಾರ ಮಾಡಿದ ಫಿಲಿಪ್ ಅಪ್ರ್ಸ್ ಎಂಬ 44 ವರ್ಷದ ವ್ಯಕ್ತಿಗೆ 21 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಫಿಲಿಪ್ ಕೋರ್ಟಿನಲ್ಲಿ ತನ್ನ ಅಪರಾಧವನ್ನು ಸಮ್ಮತಿಸಿದ್ದನು.
ಈತ ಮಸೀದಿಯಲ್ಲಿ ಗುಂಡು ಹಾರಾಟ ನಡೆಯುತ್ತಿದ್ದ ವೀಡಿಯೊವನ್ನು 30 ಮಂದಿಗೆ ಕಳುಹಿಸಿದ್ದಾನೆ. ಸಾಮೂಹಿಕ ಹತ್ಯೆಯ ವೀಡಿಯೊ ಪ್ರಚಾರ ಮಾಡುವುದು ನ್ಯೂಝಿಲೆಂಡ್ನಲ್ಲಿ ನಿಷೇಧವಿದೆ. ಹದಿನಾಲ್ಕು ವರ್ಷದವರೆಗೆ ಜೈಲು ಶಿಕ್ಷೆ ಲಭಿಸಬಹುದಾದ ಅಪರಾಧವಾಗಿದೆ.












