ಮತದಾನದ ನಡುವೆ ಘರ್ಷಣೆ: ಮತಗಟ್ಟೆ ಸಮೀಪ ಕಲ್ಲೆಸೆತ; ಕೂಚ್‍ ಬಿಹಾರಿನಲ್ಲಿ ತೃಣಮೂಲ ಕಾಂಗ್ರೆಸ್ ಕಚೇರಿಗೆ ಬೆಂಕಿ

0
181

ಸನ್ಮಾರ್ಗ ವಾರ್ತೆ

ಕೂಚ್ ಬಿಹಾರ್: ಲೋಕಸಭ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ದಾಳಿ ನಡೆದಿದ್ದು ಚಂದಮಾರಿಯದ ಮತಗಟ್ಟೆಯ ಸಮೀಪ ಕಲ್ಲೆಸೆತ ನಡೆದಿದೆ.

ಬಿಜೆಪಿ ಕಲ್ಲೆಸೆತ ನಡೆಸಿದ್ದೆಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದ್ದು ಬಿಜೆಪಿ ಸಂಸದ ನಿಷಿತ್ ಪ್ರಮಾಣಿಕ್ ನೇತೃತ್ವ ನೀಡಿದ್ದು ಎಂದು ಅದು ಹೇಳಿದೆ. ಆದರೆ ಬಿಜೆಪಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕಲ್ಲೆಸೆದದ್ದೆಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಇದೇ ವೇಳೆ ಕೂಚ್‍ ಬಿಹಾರದ ತೃಣಮೂಲ ಕಾಂಗ್ರೆಸ್ ಚುನಾವಣಾ ಸಮಿತಿ ಕಚೇರಿಗೆ ಬೆಂಕಿ ಹಚ್ಚಿದ ಘಟನೆ ನಡೆಯಿತು. ಬಾರಾಕೊದಾಲಿಯಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಇದು ಕೂಡ ಬಿಜೆಪಿಯ ಕೃತ್ಯ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಪಶ್ಚಿಮ ಬಂಗಾಳದ 42 ಸೀಟುಗಳಲ್ಲಿ ಮತದಾನ ನಡೆದಿದ್ದು ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ 21 ರಾಜ್ಯಗಳಲ್ಲಿ 102 ಸೀಟುಗಳಲ್ಲಿ ಚುನಾವಣೆ ನಡೆಯಿತು.

ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಝೊರಂ, ನಾಗಲೆಂಡ್, ರಾಜಸ್ತಾನ, ಸಿಕ್ಕಿಂ, ತಮಿಳ್ನಾಡು, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡಗಳಲಿ ಮತ್ತು ಕೇಂದ್ರಾಡಳಿತ ಪ್ರದೇಶ ಅಂಡಮಾನ್ ನಿಕೋಬರ್, ಲಕ್ಷದ್ವೀಪ, ಜಮ್ಮು ಕಾಶ್ಮೀರ, ಪುದುಚೇರಿಗಳಲ್ಲಿ ಮತದಾನ ನಡೆಯಿತು.

LEAVE A REPLY

Please enter your comment!
Please enter your name here