ಸಂಘಟನೆ ಬೆಳೆಯಬೇಕಾದರೆ ಏನು ಮಾಡಬೇಕು?

0
210

ಸನ್ಮಾರ್ಗ ವಾರ್ತೆ

✍️ ಅಬ್ದುಸ್ಸಲಾಮ್ ವಾಣಿಯಂಬಲಮ್

ಬೌದ್ಧಿಕವಾದ ಮತ್ತು ತಾತ್ವಿಕವಾದ ಸಾಮಾಜಿಕ ಕಾರ್ಯ ಚಟುವಟಿಕೆಯ ಬಗ್ಗೆ ಈಗಾಗಲೇ ನೀವು ಓದಿದ್ದೀರಿ. ಸಂಘಟನೆಯೊಳಗಿನ ಆಂತರಿಕ ಶಿಸ್ತುಗಳ ಕಾರಣದಿಂದ ಸಂಘಟನೆಯ ಕಾರ್ಯತಂತ್ರದ ಯೋಜನೆಗಳ ರೂಪೀಕರಣದಲ್ಲಿ ಇಸ್ಲಾಮೀ ಸಂಘಟನೆಗಳು ಹಿಂದುಳಿದಿದೆಯೇ? ಎಂಬ ಬಗ್ಗೆ ಪರಿಶೀಲಿಸಬೇಕಾಗಿದೆ. ಬುದ್ಧಿ, ವಿವೇಕ ವಿವರಣೆಗೆ ಸಂಬಂಧಿಸಿ ಇಸ್ಲಾಮಿನಲ್ಲಿ ಬಹಳ ಪ್ರಾಧಾನ್ಯತೆಯಿದ್ದರೂ ಸಂಘಟನೆಯಲ್ಲಿ ಅದು ಕುಂಠಿತಗೊಳ್ಳುತ್ತಿದೆ ಎಂಬುದು ಸತ್ಯವಾಗಿದೆ. ಬದಲಾಗಿ ಇಲ್ಲಿ ಪ್ರಚೋದನೆ ಕೆರಳುವಿಕೆಯು ಪ್ರಾಮುಖ್ಯತೆ ಪಡೆಯುತ್ತಿದೆ.

ಇಸ್ಲಾಮೀ ಸಂಘಟನೆಗಳು ಚಟುವಟಿಕೆಯನ್ನು ಪ್ರಾರಂಭಿಸಿದ್ದೂ ಮತ್ತು ಇಂದು ಚಟುವಟಿಕಾ ರಂಗದಲ್ಲಿರುವುದು ಕೂಡಾ ಶತ್ರುಗಳ ವಿರುದ್ಧ ಸಂಘರ್ಷದ ಮಧ್ಯೆಯಾಗಿದೆ. ಸಂಘಟನೆಗಾಗಿ ಯಾವ ರೀತಿಯ ತ್ಯಾಗಕ್ಕೂ ಸನ್ನದ್ಧರಾದ ವೀರರನ್ನು ಸಿದ್ಧಗೊಳಿಸಲು ಅದರಲ್ಲಿ ಹೆಚ್ಚಿನವುಗಳು ಶ್ರಮಿಸಿವೆ. ಫೀಲ್ಡ್ ಆಕ್ಟಿವಿಸ್ಟ್ ಗಳು ತಾತ್ವಿಕ, ಬೌದ್ಧಿಕ, ಸಾಮಾಜಿಕ ಆಕ್ಟಿವಿಸ್ಟ್ ಗಳಿಗಿಂತ ಹೆಚ್ಚಾಗಿ ಸಂಘಟನೆಯಲ್ಲಿದ್ದಾರೆ ಎಂದು ಮೊರೊಕ್ಕೋದ ಇಸ್ಲಾಮೀ ಸಂಘಟನೆಯಾದ ಹರ್ಕತುತ್ತೌಹೀದೀ ವಲ್ ಇಸ್ಲಾಹಿಯ ಮಾಜಿ ಅಧ್ಯಕ್ಷರೂ ವಿಶ್ವ ಪ್ರಸಿದ್ಧ ವಿದ್ವಾಂಸರೂ ಆದ ಡಾ| ಅಹ್ಮದ್ ರೈಸೂನಿ ಹೇಳಿದ್ದಾರೆ.

“ಈ ರೀತಿಯಲ್ಲಾದಾಗ ಸಂಘಟನೆಯ ಸಿದ್ಧಾಂತ, ಚಿಂತನೆ ಎಲ್ಲವೂ ಕೇವಲ ಸಂಘಟನೆಯ ಸೇವೆ ಮಾಡುವ ಚಿಂತನೆಯಾಗಿ ಮಾರ್ಪಟ್ಟು ಸಂಘಟನೆಯ ದಾಖಲೆಯನ್ನು ಪ್ರತಿರೋಧಿಸುವ, ಅದರ ನಿಯಮ ನಿಲುವುಗಳನ್ನು ಸಂರಕ್ಷಿಸುವ ಚಿಂತನೆಗೆ ಸೀಮಿತವಾಗಿರುತ್ತದೆ. ಅದು ಸಂಘಟನೆಯ ದೈನಂದಿನ ವಿಚಾರಗಳನ್ನು ಮಾತ್ರ ಪ್ರಸ್ತುತ ಪಡಿಸುತ್ತದೆ. ಅದೊಂದು ಪಕ್ಷದ ಚಿಂತನೆಯಂತಿರುತ್ತದೆ. ಪಕ್ಷದ ರೀತಿಯ ಈ ಚಿಂತನೆಗಳು ಒಂದು ನಿರ್ಧಿಷ್ಟ ಮಿತಿಯಲ್ಲಿರುತ್ತವೆ. ಇಸ್ಲಾಮೀ ಸಂಘಟನೆಗಳ ಮೇರೆಯೊಳಗೆ ಇರುವ ಅದರ ಕಾರ್ಯಕರ್ತರಲ್ಲಿಯೂ ನಾಯಕರಲ್ಲಿಯೂ ನೆಲೆ ನಿಂತಿರುವ ಈ ತರಹದ ಚಿಂತನೆಗಳಿಂದಾಗಿ ಬದಲಾವಣೆ ಮತ್ತು ಅಭಿವೃದ್ಧಿಯ ಜೊತೆ ಹೋಗಲು ಸಾಧ್ಯವಾಗದೆ ಹೋಯಿತು. ಸಂಘಟನೆಯ ಒಳಗೂ ಅದರ ಹೊರಗೂ ಇದು ಸಂಭವಿಸಿದೆ. ಹಲವು ಬಾರಿ ಸ್ವತಂತ್ರವಾದ ಚಿಂತನೆಯುಳ್ಳವರ ಇಜ್ತಿಹಾದಿ (ಸಂಶೋಧನಾತ್ಮಕ) ಚಿಂತನೆಯನ್ನು ಸಂಘಟನೆಯೊಳಗೆ ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವುದನ್ನು ನಾವು ನೋಡಿದ್ದೇವೆ. ಹಾಗೆಯೇ ಸಂಘಟನೆಯ ಚಿಂತನೆ ಮತ್ತು ಚಿಂತನಾ ಸಂಘಟನೆಗಳ ನಡುವೆ ಸಂಘರ್ಷವಿದೆ.

ಸಂಘಟನೆಗಳಿಗೆ ಸ್ವತಂತ್ರವಾದ ಚಿಂತನೆ ಮತ್ತು ನವೀಕೃತ ಚಿಂತನೆಯು ಅನಿವಾರ್ಯವಾಗಿದೆ. ಸಂಘಟನೆಯ ಚಿಂತನೆಯ ಜೊತೆ ಅವಿಧೇಯತೆ ತೋರುವ ಚಿಂತನಾ ಸಂಘಟನೆ(ಅಲ್ ಫಿಕ್ರುಲ್ ಹಕತ್)ಯನ್ನು ಇಸ್ಲಾಮೀ ಸಂಘಟನೆ ಪ್ರೋತ್ಸಾಹಿಸಿ ಮುಂದೆ ಹೋಗಬೇಕು. ಚಿಂತನಾ ಸಂಘಟನೆ ಮೇಲೆ ಅನುಸರಣೆ, ಶಿಸ್ತು ಹೇರಿದಾಗ ಸಂಘಟನೆಯು ಜಟಿಲವಾಗುತ್ತದೆ.

ಇಸ್ಲಾಮೀ ಸಂಘಟನೆಗಳ ಆಂತರಿಕ ಕಾರ್ಯ ಚಟುವಟಿಕೆಯನ್ನು ಬಹಿರಂಗ ಕಾರ್ಯ ಚಟುವಟಿಕೆಯು ಮೀರಿ ನಿಲ್ಲುವ ಸಾಧ್ಯತೆಯಿರುತ್ತದೆ. ಇದು ಅಪಾಯಕಾರಿಯಾಗಿದೆ. ಸಂಘಟನೆಗೆ ವ್ಯವಸ್ಥಿತ ಕಾರ್ಯ ತಂತ್ರವಿಲ್ಲದಿರುವುದು ಅದರ ದುರಂತ ಅಂತ್ಯಕ್ಕೆ ಕಾರಣವಾಗಬಹುದು. ಬಹಿರಂಗವಾದ ಕಾರ್ಯಚಟುವಟಿಕೆ ಅಂತರಿಕ ಕಾರ್ಯ ಚಟುವಟಿಕೆಯನ್ನು ಬದಿಗೆ ಸರಿಸುವ ಪ್ರಕ್ರಿಯೆ ಸಂಘಟನೆಯಲ್ಲಾಗಬಾರದು. ಬುದ್ಧಿ ವಿವೇಕತನಕ್ಕೆ ಪ್ರಾಧಾನ್ಯ ನೀಡದೆ ಬಹಿರಂಗ ಚಟುವಟಿಕೆಗಳಿಗೆ ಹೆಚ್ಚು ಪ್ರಾಧಾನ್ಯ ನೀಡುವುದರಿಂದ ಸಂಘಟನೆಗೆ ಪ್ರಯೋಜನವಾಗದು.

ವಾಸ್ತವದಲ್ಲಿ ಹೃದಯ ಮತ್ತು ಮನಸ್ಸು ಸೇರಿಕೊಂಡು ಮನುಷ್ಯನ ಉತ್ಪತ್ತಿಯಾಗಿದೆ. ಎರಡಕ್ಕೂ ಪ್ರತೇಕವಾದ ಮಹತ್ವವಿದೆ. ಆದರೆ ಅದು ಒಂದಕ್ಕೆ ಬದಲಾಗಿ ಇನ್ನೊಂದು ಎಂಬಂತೆ ಇರದು. ಹೃದಯವು ಬಯಕೆಯನ್ನು, ಪ್ರಚೋದನೆಯನ್ನು ಪ್ರತಿನಿಧಿಸುತ್ತದೆ. ಮಸ್ತಿಷ್ಕವು ವಿವೇಕತನವನ್ನು ಪ್ರತಿನಿಧಿಸುತ್ತದೆ. ಇಸ್ಲಾಮ್ ಈ ಎರಡನ್ನೂ ಅಭಿಸಂಭೋಧಿಸುತ್ತದೆ. ಹೃದಯದಿಂದ ಚಿಂತಿಸಲಾಗದು. ಮನಸ್ಸಿನಿಂದ ಬಯಕೆಯನ್ನು ಪ್ರಚೋದಿಸಲಾಗದು.

ನಿಜವಾಗಿಯೂ ಪ್ರಚೋದನೆಯು ಇಸ್ಲಾಮಿನಲ್ಲಿದೆ. ಪ್ರೀತಿ ಸ್ನೇಹ, ದುಃಖ, ಭಯ, ಗಾಬರಿ, ಶುಭ ನಿರೀಕ್ಷೆ ಮುಂತಾದ ಭಾವನೆ ಪ್ರಚೋದನೆಯನ್ನು ಇಸ್ಲಾಮ್ ಅಭಿಸಂಭೋದನೆ ನಡೆಸುತ್ತದೆ. (ಇಸ್ಲಾಮಿನ ಭಾವನಾತ್ಮಕ ಭಾಗ) ಎಂಬ ಹೆಸರಿನಲ್ಲಿ ವಿಶ್ವ ಪ್ರಸಿದ್ಧ ವಿದ್ವಾಂಸ ಶೈಖ್ ಮುಹಮ್ಮದ್ ಗಝ್ಝಾಲಿಯವರ ಕೃತಿಯಿದೆ. ಮೃದು ಹೃದಯ ಸತ್ಯವಿಶ್ವಾಸಿಯ ವಿಶೇಷತೆಯಾಗಿದೆ. ಅಲ್ಲಾಹನನ್ನು ಸ್ಮರಿಸುವಾಗ, ಕುರ್‌ಆನ್ ಆಲಿಸುವಾಗ ಸತ್ಯವಿಶ್ವಾಸಿಯ ಪ್ರತಿಕ್ರಿಯೆಯ ಕುರಿತು ಅಲ್ಲಾಹನೇ ವಿವರಿಸಿದ್ದಾನೆ:

“ಅಲ್ಲಾಹನ ಪ್ರಸ್ತಾಪ ಕೇಳಿದೊಡನೆ ಹೃದಯದಲ್ಲಿ ನಡುಕವುಂಟಾಗುವವರೇ ನಿಜವಾದ ಸತ್ಯ ವಿಶ್ವಾಸಿಗಳು. ಅವರ ಮುಂದೆ ಅಲ್ಲಾಹನ `ಸೂಕ್ತ’ ಗಳನ್ನು ಓದಿದಾಗ ಅವರ ಸತ್ಯವಿಶ್ವಾಸ ವೃದ್ಧಿಯಾಗು ತ್ತದೆ ಮತ್ತು ಅವರು ತಮ್ಮ ಪ್ರಭುವಿನ ಮೇಲೆ ಭರವಸೆಯಿಡುತ್ತಾರೆ.” (ಅಲ್ ಅಂಫಾಲ್: 2)

LEAVE A REPLY

Please enter your comment!
Please enter your name here