ಸನ್ಮಾರ್ಗ ವಾರ್ತೆ
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಅಸಮತೋಲನ ಸ್ಥಿತಿಯಲ್ಲಿರುವ ಲಿಂಗಾನುಪಾತವನ್ನು ಸುಧಾರಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಅವರು ನೀಡಿದ ಹೇಳಿಕೆಯು ವಿವಾದಕ್ಕೀಡಾಗಿದೆ.
“ಉತ್ತರಾಖಂಡದ ಲಿಂಗಾನುಪಾತವನ್ನು ಸುಧಾರಿಸಲು ಜುಲೈ 26 ರಂದು ಕೊನೆಗೊಳ್ಳುವ ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಶಿವಲಿಂಗಗಳ ಮೇಲೆ ‘ಜಲ ಅಭಿಷೇಕ’ ಮಾಡುವಾಗ ಸೆಲ್ಫಿ ಕ್ಲಿಕ್ಕಿಸುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿರುವುದೇ ವಿವಾದಕ್ಕೆ ಕಾರಣವಾಗಿದೆ.”
ಪ್ರಸ್ತುತ ಉತ್ತರಾಖಂಡವು ಪ್ರತಿ 1,000 ಹುಡುಗರಿಗೆ ಸರಾಸರಿ 899 ಹುಡುಗಿಯರ ಅನುಪಾತವನ್ನು ಹೊಂದಿದ್ದು, ರಾಷ್ಟ್ರೀಯ ಸಾಮಾನ್ಯ ಲಿಂಗಾನುಪಾತ1000/949 ಮಿತಿಯನ್ನು ತಲುಪಲು ಸಾಧ್ಯವಾಗಿಲ್ಲ.
ತಮ್ಮ ಸೆಲ್ಫಿಗಳನ್ನು ಇಲಾಖೆಯ ಇಮೇಲ್ ಐಡಿಗೆ ಕಳುಹಿಸುವಂತೆ ಸಚಿವೆ ಆರ್ಯರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಾಟ್ಸಾಪ್ನಲ್ಲಿ ತಮ್ಮ ಜಿಲ್ಲಾ ಅಧಿಕಾರಿಗಳೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳಲು ಅವರು ಕೇಳಿಕೊಂಡಿದ್ದು, ಈ ಕ್ರಮವು ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಡಿಯಲ್ಲಿ ಕೇಂದ್ರದ “ಬೇಟಿ ಬಚಾವೋ ಯೋಜನೆ”ಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದರು.
ಸಚಿವರ ಆದೇಶವು ತೀಕ್ಷ್ಣವಾದ ಪ್ರತಿಕ್ರಿಯೆಗಳು ಲಭಿಸಿದ್ದು, ಕೆಲವರು ಸರ್ಕಾರವು “ಅಂತಹ ಧರ್ಮ ಸಂಬಂಧಿತ ನಿರ್ದೇಶನಗಳನ್ನು ನೀಡುವ ಬದಲು ಹೆಚ್ಚುತ್ತಿರುವ ಅಪರಾಧ ದರಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಕೇಂದ್ರೀಕರಿಸಬೇಕು” ಎಂದು ಹೇಳಿದ್ದಾರೆ.
ಹಲವು ವಿರೋಧ ಪಕ್ಷದ ಸದಸ್ಯರು ಸಚಿವರ ನಿರ್ದೇಶನಗಳನ್ನು ಟೀಕಿಸಿದ್ದು, ಆರ್ಯರ ಕುರಿತು ವಿವಿಧ ಆರೋಪಗಳನ್ನು ಎತ್ತಿದ್ದಾರೆ. ಅನಾಮಧೇಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಧಿಕಾರಿಗಳು ಕೂಡ ಈ ವಿಲಕ್ಷಣ ಆದೇಶವನ್ನು ಟೀಕಿಸಿದ್ದಾರೆ.
"मुझे भी जन्म लेने दो,शिव के माह में शक्ति का संकल्प"
श्री @narendramodi जी द्वारा आजादी के #अमृत_महोत्सव में लिये गए संकल्प बेटी बचाओ-बेटी पढ़ाओ अभियान को और अधिक मजबूत करने के लिए मेरे द्वारा लिया गया संकल्प!
कृपया बेटियों से उनके जन्म का हक ना छीनें @smritiirani @pushkardhami pic.twitter.com/QCEUmEw4y6— Rekha Arya (@rekhaaryaoffice) July 20, 2022












