ಹವಾಮಾನ ವೈಪರೀತ್ಯ: ಪ್ರಪಂಚದ ಶೇ.85ರಷ್ಟು ಜನಸಂಖ್ಯೆ ಅಪಾಯದಲ್ಲಿ

0
421

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಹವಾಮಾನ ವೈಪರೀತ್ಯದ ಪರಿಣಾಮ ಜಗತ್ತಿನ ಶೇ.85ರಷ್ಟು ಜನರ ಮೇಲಾಗಿದೆ. 1951 ರಿಂದ2018ರವರೆಗೆ ಹೊರಬಂದ ಸಾವಿರಾರು ಅಧ್ಯಯನಗಳನ್ನು ಮುಂದಿಟ್ಟು ಸಂಶೋಧಕ ತಂಡ ಈ ನಿರ್ಣಯಕ್ಕೆ ಬಂದಿದೆ.

ಒಟ್ಟು ಜನಸಂಖ್ಯೆಯಲ್ಲಿ 85 ಶೇಕಡಾ ಪ್ರದೇಶಗಳು ಹವಾಮಾನ ವೈಪರೀತ್ಯದ ಹಿಡಿತದಲ್ಲಿದೆ. ವಾತಾವರಣದ ಒತ್ತಡ ಬೃಹತ್ತಾಗಿ ಹೆಚ್ಚಳವಾಗುತ್ತಿದ್ದು ಮಳೆ ಹೆಚ್ಚಾಗಿದೆ. ಪ್ರತೀ ಪ್ರದೇಶದಲ್ಲಿ ಬೇರೆ ಬೇರೆ ರೀತಿಯ ವೈಮಾನಿಕ ಹಾನಿಗಳಾಗುತ್ತಿದೆ. ಶ್ರೀಮಂತ ದೇಶಗಳಲ್ಲಿ ಗಣನೀಯ ಅಧ್ಯಯನ ನಡೆದರೆ ಬಡ ದೇಶಗಳಲ್ಲಿ ಇದು ನಡೆದೇ ಇಲ್ಲ.

ಆಫ್ರಿಕದ ತಾಪ, ಮಳೆಯಲ್ಲಿ ವತ್ಯಯ ಆಗುತ್ತಿರುವುದು ಇದೇ ಕಾರಣವಾಗಿದೆ. ಈಗ ಹವಮಾನ ವೈಪರೀತ್ಯದ ಅತೀ ದೊಡ್ಡ ಬಲಿಪಶುಗಳು ಅಭಿವೃದ್ಧಿ ಹೊಂದುವ ದೇಶಗಳಾಗಿವೆ. ಪೋಸಿಲ್ ಎನರ್ಜಿ(ಪಳೆಯುಳಿಕೆ ಇಂಧನಗಳು)ಹವಮಾನದ ದೊಡ್ಡ ಆತಂಕವೆಂದು ಅಧ್ಯಯನ ವರದಿ ಬಹಿರಗಂಪಡಿಸುತ್ತಿದೆ. ಇದರಲ್ಲಿ ಬದಲಾವಣೆ ತರಲು ಸಾಧ್ಯವಾದರೆ ಲಕ್ಷಾಂತರ ಜನರ ಜೀವ ಉಳಿಯಬಹುದು.