ನೈತಿಕ ಪೋಲಿಸ್ ಗಿರಿ ಸಮರ್ಥಿಸಿಕೊಂಡ ಮುಖ್ಯಮಂತ್ರಿಯ ಹೇಳಿಕೆಯು ಖಂಡನೀಯವಾಗಿದೆ- ಸುಮತಿ.ಎಸ್.ಹೆಗ್ಡೆ

0
662

ಸನ್ಮಾರ್ಗ ವಾರ್ತೆ

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ನೈತಿಕ ಪೋಲಿಸ್‌ಗಿರಿ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೋಲಿಸ್ ಇಲಾಖೆ ಮೂಕ ಪ್ರೇಕ್ಷಕರಾಗಿದ್ದು ಜಿಲ್ಲೆಯಲ್ಲಿ ಆತಂಕದ ಸನ್ನಿವೇಶ ನಿರ್ಮಾಣವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಮುಖ್ಯಮಂತ್ರಿಗಳು ಅಂತಹ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತೆ, ಭಾವನೆಗಳಿಗೆ ದಕ್ಕೆಯಾದಾಗ ಕ್ರಿಯೆಗೆ ಪ್ರತಿಕ್ರಿಯೆ ನಡೆಯುತ್ತದೆ ಎಂಬ ಹೇಳಿಕೆಯು ತೀರಾ ಖಂಡನೀಯವಾಗಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದು ಜೆಡಿಎಸ್ ನಾಯಕಿ ತೀವ್ರ ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ, ಉದ್ಯೋಗ,ಆರೋಗ್ಯ ಸೇರಿದಂತೆ ಜನರ ಬದುಕಿನ ವಿಚಾರಗಳನ್ನು ಬದಿಗೆ ಸರಿಸಿ ಕೇವಲ ಕೋಮುದ್ವೇಷದಿಂದಲೇ ಜಿಲ್ಲೆಯ ರಾಜಕಾರಣವನ್ನು ನಿಯಂತ್ರಿಸುತ್ತಿದೆ. ಇದರಿಂದಾಗಿ ಕಾನೂನನ್ನು ಕೈಗೆತ್ತಿ ಅಮಾಯಕರ ಮೇಲೆ ಧಾಳಿ ನಡೆಸುವ ಮೂಲಕ ಬಿಜೆಪಿ ತನ್ನ ಸಂಸ್ಕ್ರತಿಯನ್ನು ಪ್ರದರ್ಶಿಸುತ್ತಿದೆ. ಇದನ್ನು ಕೂಡಲೇ ಮಟ್ಟ ಹಾಕಲು ಜಿಲ್ಲೆಯ ಪೋಲಿಸ್ ಇಲಾಖೆ ಹಾಗೂ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸುಮತಿ ಹೆಗ್ಡೆ ತಿಳಿಸಿದರು.