ಲಂಚ ಕೇಳಿದರೆ ದೂರು ನೀಡಲು ಮುಖ್ಯಮಂತ್ರಿಗೆ ಫೋನ್‍ ಮಾಡಬಹುದು: ಭ್ರಷ್ಟಾಚಾರದ ವಿರುದ್ಧ ಸ್ಟಾಲಿನ್ ಕ್ರಮ

0
344

ಸನ್ಮಾರ್ಗ ವಾರ್ತೆ

ಗುಡಲ್ಲೂರ್: ಲಂಚದ ವಿರುದ್ಧ ಕಠಿಣ ಕ್ರಮಕ್ಕೆ ತಮಿಳ್ನಾಡು ಮುಖ್ಯಮಂತ್ರಿ ಮನಸು ಮಾಡಿದ್ದಾರೆ. ಸರಕಾರಿ ಅಧಿಕಾರಿಗಳು ಲಂಚ ಕೇಳಿದರೆ ಕೂಡಲೇ ಜನರು ಮುಖ್ಯಮಂತ್ರಿ ಸ್ಟಾಲಿನ್‍ರ ಮೊಬೈಲ್‍ಗೆ ಕರೆ ಮಾಡಿ ದೂರು ನೀಡಬಹುದು.

ಈ ಮೊಬೈಲ್ ಸಂಖ್ಯೆ ಸ್ಟಾಲಿನ್ ಕಚೇರಿಯದ್ದಾಗಿದೆ. ಮನೆ ನಂಬ್ರ, ಮನೆ ಕಟ್ಟುವ ಪ್ಲಾನ್, ಕುಡಿಯುವ ನೀರು, ವಿದ್ಯುತ್ ಕನೆಕ್ಷನ್ ಮುಂತಾದ ಮೂಲಭೂತ ಆವಶ್ಯಕತೆಗಳನ್ನು ನಗರಸಭೆ ಮತ್ತು ಪಂಚಾಯತ್‍ಗಳಿಂದ ಸರ್ಟಿಫಿಕೆಟ್ ಸಿಗುವ ನಂತರ ಜನರು ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಲಂಚ ಕೇಳಿದರೆ, ಮನೆ ತೆರವಿಗೆ ಗೂಂಡಾಗಳನ್ನು ಕಳುಹಿಸುವುದಿದ್ದರೂ ಕೂಡಲೇ ಮುಖ್ಯಮಂತ್ರಿಯ ಫೋನ್‍ಗೆ ಕರೆ ನೀಡಬಹುದಾಗಿದೆ.

ಅಧಿಕಾರಿಗಳು ಮತ್ತು ಆಡಳಿತ ಸಮಿತಿ ಸದಸ್ಯರು, ರಾಜಕೀಯ ನಾಯಕರು ಯಾರೆ ಇರಲಿ ಲಂಚ ಕೇಳಿದರೆ ಹಿಂಜರಿಯದೆ ಮುಖ್ಯಮಂತ್ರಿಯ ಫೋನ್ ಕರೆ ಮಾಡಬೇಕೆಂದು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದರು.