ಸನ್ಮಾರ್ಗ ವಾರ್ತೆ
ಮುಂಬೈ: ಆರಾಧಾನಾಲಯಗಳಲ್ಲಿ ಧ್ವನಿವರ್ಧಕ ಬಳಸುವ ಕುರಿತು ಪೂರ್ವ ಅನುಮತಿ ಪಡೆದಿರಬೇಕೆಂದು ಮಹಾರಾಷ್ಟ್ರ ಸರಕಾರ ಹೊಸ ಆದೇಶವನ್ನು ಹೊರಡಿಸಿದೆ. ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಇದಕ್ಕೆ ಸಂಬಂಧಿಸಿ ಪೊಲೀಸ ಕಮಿಷನರ್ಗಳೊಂದಿಗೆ ಭೇಟಿಯಾಗಲಿದ್ದಾರೆ. ಎರಡು ದಿವಸಗಳಲ್ಲಿ ವಿಶಾಲವಾದ ಮಾರ್ಗಸೂಚಿಯನ್ನು ತರಲಾಗುವುದು ಎಂದು ಪಾಟಿಲ್ ತಿಳಿಸಿದರು.
ಪೂರ್ವಾನುಮತಿ ಪಡೆದುಕೊಂಡಿರುವ ಮಸೀದಿಗಳಿಂದಲೋ ದೇವಸ್ಥಾನಗಳಿಂದ ಮೈಕ್ ತೆಗೆಯುವುದಿಲ್ಲ ಎಂದು ಗೃಹ ಸಚಿವ ಹೇಳಿದರು. ಅನುವದನೀಯವಾದ ಡೆಸಿಬಲ್ ವ್ಯಾಪ್ತಿಯಲ್ಲಿ ಮೈಕ್ ಉಪಯೋಗಿಸುವುದಕ್ಕೆ ಅನುಮತಿ ನೀಡಬಹುದು ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರಗಿಸಲಾಗುವುದು.
ರಾಜ್ಯದ ಕಾನೂನು ವ್ಯವಸ್ಥೆಯ ಮೇಲೆ ಗೃಹ ಸಚಿವಾಲಯ ಸದಾ ಕಣ್ಣಿಟ್ಟಿದೆ. ಯಾರಾದರೂ ಕೆಡಿಸಲು ನೋಡಿದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಮುಸ್ಲಿಂ ಮಸೀದಿಗಳಿಂದ ಮೈಕ್ಅನ್ನು ತೆಗೆಯದಿದ್ದರೆ ಮಸೀದಿಯ ಮುಂಭಾಗದಲ್ಲಿ ಹನುಮಾನ್ ಚಾಲಿಸ್ ಪಠಿಸುವೆ ಎಂದು ರಾಜ್ ಠಾಕರೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರದಿಂದ ಹೊಸ ಆದೇಶ ಹೊರಬಂದಿದೆ. ಬಿಜೆಪಿಗಾಗಿ ರಾಜ್ ಠಾಕ್ರೆ ಕೋಮು ದ್ವೇಷದ ನಿಲುವು ತೆಗೆದಿದ್ದಾರೆ. ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾವು ಸಾಹೆಬ್ ದಾನ್ವೆ ಭೇಟಿಯಾದ ಮೇಲೆ ಮಸೀದಿಯ ಅದಾನ್ ಕರೆಯ ವಿರುದ್ಧ ರಾಜ್ ಠಾಕ್ರೆ ಧ್ವನಿ ಎತ್ತಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಗಲಭೆ ಬಯಸಿಲ್ಲ, ಪ್ರಾರ್ಥನೆ ವಿರೋಧಿಸುವುದಿಲ್ಲ. ಮಸೀದಿಯ ಮೈಕ್ ಅನ್ನು ತೆಗೆಯಲು ಆಗ್ರಹಿಸುವುದು ಎಂದು ಹೇಳಿದರು. ಧರ್ಮಗಳು ದೇಶದ ಕಾನೂನಿಗೆ ಅತೀತವಲ್ಲ ಎಂದು ಮುಸ್ಲಿಮರು ಮನಗಾಣಬೇಕೆಂದು ರಾಜ್ ತಿಳಿಸಿದರು.












