ಶ್ರೀನಿವಾಸಪುರದಲ್ಲಿ ಸೌಹಾರ್ದ ಇಫ್ತಾರ್ ಕೂಟ: ದೇಹದ ಅಂಗಗಳಂತೆ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಒಗ್ಗಟ್ಟನ್ನು ಸಾರುತ್ತವೆ: ಸಿ. ರವಿ ಕುಮಾರ್

0
470

ಸನ್ಮಾರ್ಗ ವಾರ್ತೆ

ಶ್ರೀನಿವಾಸಪುರ: ಪವಿತ್ರ ರಮಝಾನ್ ಉಪವಾಸ ವ್ರತಾಚರಣೆಯಲ್ಲಿ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹಾಗೂ ಜಾಕೀರ್ ಹುಸೇನ್ ಮೊಹಲ್ಲಾದ ಮಾರಿಯಮ್ ಮಸೀದಿಯು ಹಿಂದೂ-ಮುಸ್ಲಿಮರ ಸೌಹಾರ್ದತೆಗೆ ಸಾಕ್ಷಿಯಾಯಿತು.

ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಮಾರಿಯಮ್ ಮಸೀದಿ ಬಳಿ ನಡೆದ ಇಫ್ತಾರ್ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಭಾಗವಹಿಸಿ ಸೌಹಾರ್ದತೆಯನ್ನು ಸಾರಿದರು.

ಈ ಇಫ್ತಾರ್ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ವೃತ್ತ ನೀರಿಕ್ಷಕ ಸಿ.ರವಿ ಕುಮಾರ್‌ರವರು ಭಾಗವಹಿಸಿ, ಇಸ್ಲಾಂನ ತತ್ವಗಳಲ್ಲಿ ರಮಝಾನ್ ಉಪವಾಸ ಎನ್ನುವುದು ಅತೀ ಪವಿತ್ರವಾದದ್ದು ಇದರಲ್ಲಿ ಮುಸ್ಲಿಂ ಬಾಂಧವರು ಅತಿ ಕಠಿಣವಾದ ಉಪವಾಸವನ್ನು ಆಚರಿಸುತ್ತಾರೆ. ಈ ಜಗತ್ತು ಒಂದು ಕುಟುಂಬ.  ದೇಹದ ಎಲ್ಲ ಅಂಗಗಳಿಗೆ ಅದರದ್ದೇ ಆದ ಕರ್ತವ್ಯವಿದೆ. ಒಂದು ವೇಳೆ ಹಿಂದೂ  ಎಂದು ಕೈಯನ್ನು, ಮುಸ್ಲಿಮ್ ಎಂದು ಕಾಲನ್ನು ದೂರವಿಟ್ಟರೆ ನಮ್ಮ ದೇಹ  ಪರಿಪೂರ್ಣವಾಗದು. ದೇಹದ ಅಂಗಗಳ ಹಾಗೆ ಸಮಾಜದಲ್ಲಿರುವ ಎಲ್ಲ ಆಚರಣೆಗಳು ಮುಖ್ಯ ಇದು ಒಗ್ಗಟ್ಟನ್ನು ಪ್ರತಿಪಾದಿಸುತ್ತವೆ ಎಂದರು.

ಈ ವೇಳೆ ವೃತ್ತ ನಿರೀಕ್ಷಿಕರಾದ ರವಿ ಕುಮಾರ್, ಮೌಲಾನಾ ಅಬೂಬಕರ್, ಪುರಸಭೆ ಸದಸ್ಯ ಕೆ.ಅನೀಸ್ ಅಹ್ಮದ್, ಕೆ.
ಮಂಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ರೆಡ್ಡಿ ಮುನಿವೆಂಕಟರೆಡ್ಡಿ, ಶ್ರೀನಿವಾಸ್, ಮಂಜುನಾಥ್ ಶಂಕರ್ ಸೇರಿದಂತೆ ಹಿಂದೂ- ಮುಸ್ಲಿಂ ಮುಖಂಡರು ಹಾಗೂ ಬಾಂಧವರು  ಉಪಸ್ಥಿತರಿದ್ದರು.