ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ- ಜ್ಯೋತಿರಾದಿತ್ಯ ಸಿಂಧಿಯಾ

0
448

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.10: ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಶಿದ್‍ರ ಬೆನ್ನಿಗೆ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಕಾಂಗ್ರೆಸ್ಸಿನಲ್ಲಿ ಆತ್ಮಾವಲೋಕನದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಂಡು ತಮ್ಮ ಪರಿಸ್ಥಿತಿಯಲ್ಲಿ ಸುಧಾರಣೆ ತರಬೇಕಾದ್ದು ಕಾಲದ ಬೇಡಿಕೆ ಆಗಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ರಾಜೀನಾಮೆ ಪಾರ್ಟಿಗೆ ನಾಯಕರಿಲ್ಲದ ಸ್ಥಿತಿಯನ್ನು ತಂದೊಡ್ಡಿದೆ. ಲೋಕಸಭಾ ಚುನಾವಣೆಯ ಸೋಲಿನ ಅವಲೋಕನ ನಡೆಸಲು ಪಾರ್ಟಿಗೆ ಇನ್ನೂ ಸಾಧ್ಯವಾಗಿಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗ ಸಲ್ಮಾನ್ ಖುರ್ಶಿದ್ ಹೇಳಿದ್ದರು. ಖುರ್ಶಿದ್‍ರ ಹೇಳಿಕೆಯನ್ನು ಬೆಂಬಲಿಸಿ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಅವಲೋಕನದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಇತರರ ಹೇಳಿಕೆಯ ಕುರಿತು ನಾನು ಏನೂ ಹೇಳುವುದಿಲ್ಲ. ಆದರೆ ಕಾಂಗ್ರೆಸ್ ಕೆಟ್ಟ ಅವಸ್ಥೆಯಲ್ಲಿದೆ. ಆತ್ಮವಿಶ್ವಾಸದ ಅಗತ್ಯತೆ ಇದೆ. ಪಾರ್ಟಿಯ ಅವಸ್ಥೆಯನ್ನು ಅವಲೋಕಿಸಿ ಉತ್ತಮಪಡಿಸಬೇಕಾಗಿದೆ. ಅದು ಕಾಲದ ಬೇಡಿಕೆಯಾಗಿದೆ ಎಂದು ಸಿಂಧಿಯಾ ಹೇಳಿದರು. ಕಾಂಗ್ರೆಸ್ ಸೋಲಿಗೆ ಕಾರಣ ಕಂಡು ಹುಡುಕಲು ಐದು ತಿಂಗಳಿನಿಂದ ಆಗಿಲ್ಲ. ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಇದು ಆಗಿಲ್ಲ ಎಂದು ಸಲ್ಮಾನ್ ಖುರ್ಶಿದ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.