ಪರ್ಯಾಯ ಕೃಷಿ ಮಸೂದೆ ತಯಾರಿಸಿದ ಕಾಂಗ್ರೆಸ್

0
335

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.5: ಮೋದಿ ಸರಕಾರದ ಕೃಷಿ ಮಸೂದೆಗೆ ಕಾಂಗ್ರೆಸ್ ಆಡಳಿತದ ರಾಜ್ಯಗಳು ಪರ್ಯಾಯ ಕೃಷಿ ಮಸೂದೆಯನ್ನು ಸಿದ್ಧಪಡಿಸಿದೆ. ವಿಶೇಷ ವಿಧಾನಸಭಾ ಅಧಿವೇಶನ ಕರೆದು ಪರ್ಯಾಯ ಮಸೂದೆಯನ್ನು ಪಾಸು ಮಾಡುವ ಸಿದ್ಧತೆ ಮಾಡಿಕೊಂಡಿದ್ದು, ಪರ್ಯಾಯ ಕರಡು ಮಸೂದೆಯನ್ನು ಕಾಂಗ್ರೆಸ್ ಪಾರ್ಟಿಯ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಟ್ಟಿದೆ.

ಕೇಂದ್ರದ ಕಾನೂನು ಜಾರಿಗೊಳಿಸುವ ತಾರೀಕನ್ನು ರಾಜ್ಯಗಳು ನಿಶ್ಚಯಿಸುವುದು ಒಂದು ಮಸೂದೆಯಾದರೆ, ರೈತ ಮತ್ತು ಯಾವುದೇ ಕಂಪೆನಿಯೊಂದಿಗೆ ಗುತ್ತೆ ಕೃಷಿ ಮಾಡಲು ಸಿದ್ಧನಿದ್ದರೆ ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಉತ್ಪನ್ನ ಖರೀದಿಸುವಂತಿಲ್ಲ ಎನ್ನುವುದು ಇನ್ನೊಂದು ಮಸೂದೆಯಾಗಿದೆ.

ವಿಧಾನಸಭೆ ಪಾಸು ಮಾಡುವ ಮಸೂದೆ ಕಾನೂನು ರೂಪಕ್ಕೆ ಬರಬೇಕಾದರೆ ರಾಷ್ಟ್ರಪತಿಯ ಅಂಕಿತ ಬೇಕಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಆದರೆ, ಮಸೂದೆ ಮರಳಿಸಿದರೆ ಕಾರಣವನ್ನು ತಿಳಿಸಬೇಕಾಗುತ್ತದೆ.

ರಾಜಸ್ತಾನ, ಪಂಜಾಬ್, ಛತ್ತೀಸ್ಗಡ, ಪುದುಚೇರಿಗಳಲ್ಲಿ ಕಾಂಗ್ರೆಸ್ ಆಡಳಿತವಿದೆ. ಸಖ್ಯಪಕ್ಷಗಳೊಂದಿಗೆ ಮಹಾರಾಷ್ಟ್ರ ಮತ್ತು ಜಾರ್ಖಂಡಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಕೇರಳ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರಸೇತರ ಸರಕಾರ ಇದೆ. ಬಿಜೆಪಿಯೇತರ ರಾಜ್ಯಗಳು ಕೂಡ ಇಂತಹದೇ ಕ್ರಮಕ್ಕಿಳಿಯುವ ಸಾಧ್ಯತೆಗಳಿವೆ.