ನಮ್ಮದು ಪ್ರಜಾಪ್ರಭುತ್ವ ದೇಶವೆಂಬುದನ್ನು ಅವರು ಮರೆತಿದ್ದಾರೆ: ನಾವು ನೆನಪಿಸಿ ಕೊಡಬೇಕಾಗಿದೆ- ಪ್ರಿಯಾಂಕಾ ಗಾಂಧಿ

0
697

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.5: ಉತ್ತರ ಪ್ರದೇಶದಲ್ಲಿ ಪ್ರತಿಪಕ್ಷಗಳ ಮೇಲೆ ನಡೆದ ದಾಳಿಗಳನ್ನು ಕಾಂಗ್ರೆಸ್ ನೇತಾರೆ ಪ್ರಿಯಾಂಕಾ ಗಾಂಧಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಲೋಕದಳ ನಾಯಕ ಜಯಂತ್ ಚೌಧರಿಗೂ ಅವರ ಕಾರ್ಯಕರ್ತರಿಗೂ ಪೊಲೀಸರು ಲಾಠಿ ಬೀಸಿದ್ದನ್ನು ಪ್ರಿಯಾಂಕಾ ಖಂಡಿಸಿದ್ದಾರೆ.

ಹಾಥ್ರಸ್‍ನಲ್ಲಿ ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿಯ ಮನೆಗೆ ಹೋಗಲು ಹೋದ ಚೌಧರಿಯವರ ಮೇಲೆ ಪೊಲೀಸರು ಲಾಠಿ ಚಾರ್ಜು ಮಾಡಿದ್ದರು. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಲೋಕದಳ ನಾಯಕ ಜಯಂತ್ ಚೌಧರಿಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ನಡೆಸಿದ ದೌರ್ಜನ್ಯಗಳು ಖಂಡನೀಯವಾಗಿದೆ. ಪ್ರತಿಪಕ್ಷಗಳ ನಾಯಕರ ವಿರುದ್ಧ ಸರಕಾರ ಈ ರೀತಿ ಹಲ್ಲೆ ನಡೆಸುತ್ತಿದೆ. ಉತ್ತರ ಪ್ರದೇಶ ಅಹಂಕಾರದ ವರ್ತನೆಗಳು ಆಡಳಿತ ಕುಸಿತದ ಸೂಚನೆಯಾಗಿದೆ. ಒಂದು ವೇಳೆ ನಮ್ಮದ ಒಂದು ಪ್ರಜಾಪ್ರಭುತ್ವ ದೇಶ ಎಂಬುದನ್ನು ಅವರು ಮರೆತಿರಬಹುದು. ಸಾರ್ವಜನಿಕರು ಇದನ್ನು ಅವರಿಗೆ ನೆನಪಿಸಲಿದ್ದಾರೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು.

ಈ ಹಿಂದೆ ಹಥ್ರಾಸ್‍ಗೆ ಹೋಗುವ ದಾರಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾರನ್ನು ತಡೆದು ಪೊಲೀಸರು ಹಲ್ಲೆ ಮಾಡಿದ್ದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬಾಲಕಿಯ ಮನೆಗೆ ರಾಹುಲ್, ಪ್ರಿಯಾಂಕಾರನ್ನು ಹೋಗಲು ಬಿಡಲಾಗಿತ್ತು. ನಂತರ ಹಲವು ರಾಜಕೀಯ ಪಾರ್ಟಿಗಳ ನಾಯಕರು ಹಥ್ರಾಸ್‍ಗೆ ಭೇಟಿ ನೀಡಿದ್ದಾರೆ.