‘ಬಿಜೆಪಿ ಓಡಿಸಿ, ಹಣದುಬ್ಬರ ತೊಲಗಿಸಿ’- ಉ.ಪ್ರದೇಶದಲ್ಲಿ ಕಾಂಗ್ರೆಸ್‌‌ನಿಂದ ಸಾರ್ವಜನಿಕ ಜಾಗೃತಿ ಅಭಿಯಾನ, ಪಾದಯಾತ್ರೆ

0
355

ಸನ್ಮಾರ್ಗ ವಾರ್ತೆ

ನವದೆಹಲಿ: ಉತ್ತರಪ್ರದೇಶದಲ್ಲಿ 2022ರ ಪ್ರಾರಂಭದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​​ನಿಂದ ರಾಷ್ಟ್ರಾದ್ಯಂತ ನವೆಂಬರ್​ 14ರಿಂದ ಸಾರ್ವಜನಿಕ ಜಾಗೃತಿ ​ಅಭಿಯಾನ ನಡೆಯುತ್ತಿದೆ. ಇಂದು ರಾಹುಲ್ ಗಾಂಧಿ ಅಮೇಠಿಯಲ್ಲಿ “ಬಿಜೆಪಿಯನ್ನು ಓಡಿಸಿ, ಹಣದುಬ್ಬರ ತೊಲಗಿಸಿ” (BJP Bhagao, Mehangai Hatao) ಎಂಬ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕ ಜಾಗೃತಿ ​ಅಭಿಯಾನದ ಭಾಗವಾಗಿ ಈ ರ್ಯಾಲಿ ಇಂದು ಅಮೇಠಿಯಲ್ಲಿ ನಡೆಯಲಿದೆ. ರಾಹುಲ್​ ಗಾಂಧಿ ಜಗದೀಶ್​ಪುರದಿಂದ ಹರಿಮೌವರೆಗೆ ಪಾದಯಾತ್ರೆ ನಡೆಸಲಿದ್ದಾರೆ ಎಂದು ಹೇಳಲಾಗಿದ್ದು, ಈ ಪಾದಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್​ ನಾಯಕರೂ ಕೂಡ ಪಾಲ್ಗೊಳ್ಳಲಿದ್ದಾರೆ.

ಈ ನಡುವೆ ಯೋಗಿ ಆದಿತ್ಯನಾಥ್ ಸರಕಾರ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯಲ್ಲಿ ನಿರತವಾಗಿದೆ‌. ಪ್ರಧಾನಿ ಮೋದಿ ಕೆಲವೇ ದಿನಗಳ ಹಿಂದೆ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿದ್ದರು. ಮತ್ತು ಇಂದು ಅವರು ಪುನಃ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದು, ಗಂಗಾ ಎಕ್ಸ್​ಪ್ರೆಸ್​ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.