ಉ.ಪ್ರದೇಶ ವಿಧಾನಸಭಾ ಚುನಾವಣೆ: ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್; 40% ರಷ್ಟು ಮಹಿಳೆಯರಿಗೆ ಟಿಕೆಟ್

0
18

ಸನ್ಮಾರ್ಗ ವಾರ್ತೆ

ಲಕ್ನೊ: ಮಹಿಳೆಯರು ಯುವಕರನ್ನೊಳಗೊಂಡ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದ್ದು, 125 ಮಂದಿಯಲ್ಲಿ ಶೇ. 40ರಷ್ಟು ಅಂದರೆ 50 ಮಹಿಳೆಯರಿಗೆ ಸ್ಥಾನವನ್ನು ನೀಡಿದೆ‌. ಕಾಂಗ್ರೆಸ್ ಹೇಳುತ್ತಾ ಬಂದ ಶೇ. 40ರಷ್ಟು ಮಹಿಳಾ ಪ್ರಾತಿನಿಧ್ಯದ ಮಾತನ್ನು ತನ್ನ ಮೊದಲ ಹಂತದ ಚುನಾವಣೆಯ ಪಟ್ಟಿಯಲ್ಲಿ ಈಡೇರಿಸಿದೆ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ಹೊಣೆ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಘೋಷಿಸಿದರು. ಉನ್ನಾವೋ ಅತ್ಯಾಚಾರ ಸಂತ್ರಸ್ತ ಬಾಲಕಿಯಯ ತಾಯಿ, ಆಕ್ಟಿವಿಸ್ಟ್ ಸದಫ್ ಜಾಫರ್, ಆಶಾ ಕಾರ್ಯಕರ್ತೆ ಪೂನಂ ಪಾಂಡೆ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಫೆಬ್ರುವರಿ ಹತ್ತರಿಂದ ಏಳು ಹಂತದಲ್ಲಿ ಉತ್ತರಪ್ರದೇಶದ ವಿಧಾನಸಭೆಗೆ ಚುನಾವಣೆಯು ನಡೆಯಲಿದ್ದು ರಾಜ್ಯದ 2017ರ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ 47 ಸೀಟು ಬಿಎಸ್‍ಪಿ 19 ಮತ್ತು ಕಾಂಗ್ರೆಸ್ ಏಳು ಸೀಟು ಗೆದ್ದಿತ್ತು. ಜನರ ಮನಗೆಲ್ಲಲು ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ನಿರಂತರ ಶ್ರಮಿಸುತ್ತಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷಗಳು ಈ ಸಲ ಕಾಂಗ್ರೆಸ್‍ನೊಂದಿಗೆ ಸಖ್ಯ ಮಾಡಿಕೊಂಡಿಲ್ಲ.

LEAVE A REPLY

Please enter your comment!
Please enter your name here