ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವೆ: ಸ್ವಾಮಿ ಪ್ರಸಾದ್ ಮೌರ್ಯ

0
435

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತಾನು ಬಿಜೆಪಿಗೆ ರಾಜೀನಾಮೆ ಕೊಟ್ಟಿರುವುದು ಪಕ್ಷದಲ್ಲಿ ಭೂಕಂಪ ಸೃಷ್ಟಿಸಿದೆ ಎಂದು ಸ್ವಾಮಿ ಪ್ರಸಾದ್ ಮೌರ್ಯ ಹೇಳಿದರು. ತನ್ನ ರಾಜಕೀಯ ಘೋಷಣೆಯನ್ನು ಶುಕ್ರವಾರದವರೆಗೆ ಕಾಯಲು ಅವರು ಹೇಳಿದರು. ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆಯನ್ನು ಹೊಡೆಯುವೆ ಎಂದು ಅವರು ಹೇಳಿದರು.

ಇದೇ ವೇಳೆ ಬಿಎಸ್ಪಿಯಲ್ಲಿರುವಾಗ ಅವರು ಮಾಡಿದರೆನ್ನಲಾದ ದ್ವೇಷದ ಭಾಷಣದಲ್ಲಿ ಬಂಧನ ವಾರೆಂಟ್‌ನ್ನು ಕೋರ್ಟು ಹೊರಡಿಸಿದೆ. ತಾನು ಎಲ್ಲಿಗೆ ಹೋಗುವೆ ಎಂಬುದನ್ನು ಜನವರಿ 14ಕ್ಕೆ ತಿಳಿಸುವೆನು. ಹಿಂದುಳಿವರ ವಿಷಯದಲ್ಲಿ ಬಿಜೆಪಿ ಕುರುಡಾಗಿದೆ. ಉತ್ತರಪ್ರದೇಶದಲ್ಲಿ 14 ವರ್ಷದ ಬಳಿಕ ಲಭಿಸಿದ 2017ರ ವಿಜಯಕ್ಕೆ ಬಿಜೆಪಿ ತನಗೆ ಕೃತಜ್ಞತೆ ತೋರಿಸಲಿಲ್ಲ. ತನ್ನನ್ನು ಮಂತ್ರಿ ಮಾಡಿದ್ದು ಬಿಜೆಪಿಯ ಔದಾರ್ಯ ಅಲ್ಲ ಎಂದು ಮೌರ್ಯ ನೆನಪಿಸಿದರು.

ರಾಜೀನಾಮೆ ಹಿಂಪಡೆಯಲು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮನವಿ ಮಾಡಿದ್ದರು. ಅದನ್ನು ಸ್ವಾಮಿ ಪ್ರಸಾದ್ ಮೌರ್ಯ ತಿರಸ್ಕರಿಸಿದ್ದರು. 2014ರ ದ್ವೇಷ ಭಾಷಣಕ್ಕೆ ಬಂಧನ ವಾರಂಟ್ ಹೊರಡಿಸಲಾಗಿದೆ. ಸುಲ್ತಾನ್‌ಪುರದ ವಾರಂಟ್ ಇದು ಬುಧವಾರ ಅವರು ಕೋರ್ಟಿನಲ್ಲಿ ಹಾಜರಾಗಬೇಕೆಂದು ಸೂಚಿಸಲಾಗಿತ್ತು. ಆದರೆ ಮೌರ್ಯ ವಾರಂಟ್ ತಿರಸ್ಕರಿಸಿದ್ದಾರೆ. ಜನುವರಿ 24ಕ್ಕೆ ಹಾಜರಾಗಲು ಕೋರ್ಟು ತಿಳಿಸಿದೆ. ಕೋರ್ಟಿನಲ್ಲಿ ಉತ್ತರಿಸುವೆ ಎಂದು ಮೌರ್ಯ ಹೇಳಿದರು.