ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮೇ. 26: ವಿಶ್ವವು ಚೀನದೊಂದಿಗೆ ವ್ಯಾಪಾರ ಮಾಡಲು ಸಿದ್ಧವಾಗದ್ದು ಭಾರತಕ್ಕೆ ಲಾಭ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಖಾಸಗಿ ಚ್ಯಾನೆಲ್ ಸಂದರ್ಶನದಲ್ಲಿ ಗಡ್ಕರಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. ಲೋಕ ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಚೀನ ದೊಡ್ಡ ಸೂಪರ್ ಪವರ್ ಆಗಿದ್ದರೂ ಚೀನದೊಂದಿಗೆ ವ್ಯಾಪಾರ ಸಂಬಂಧ ಕುದುರಿಸಲು ಈಗ ಯಾವುದೇ ದೇಶ ತಯಾರು ಆಗುವುದಿಲ್ಲ. ಇದು ಭಾರತಕ್ಕೆ ಅನುಗ್ರಹವಾಗಿದೆ.
ಭಾರತ ಐದು ಲಕ್ಷ ಕೋಟಿ ಡಾಲರ್ ಆರ್ಥಿಕ ಸಾಮರ್ಥ್ಯದ ದೇಶವನ್ನಾಗಿ ಮಾಡುವ ನರೇಂದ್ರ ಮೋದಿಯ ಬಯಕೆ ಈಡೇರುವ ಅವಕಾಶ ಇದು ಎಂದು ಗಡ್ಕರಿ ಹೇಳಿದರು. ಚೀನ ಸಹಿತ ದೇಶಗಳು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬೃಹತ್ ಮೊತ್ತವನ್ನು ಭಾರತದ ಕಂಪೆನಿಗಳಿಗೆ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಹೊಸ ವಿದೇಶಿ ಹೂಡಿಕೆ ಪ್ರಕಾರ ಭಾರತದ ನೆರೆಯ ದೇಶಗಳು ಭಾರತದ ಕಂಪೆನಿಗಳಲ್ಲಿ ಹೂಡಿಕೆ ನಡೆಸುವಾಗ ಕೇಂದ್ರ ಸರಕಾರದ ನೋ ಅಬ್ಜೆಕ್ಷನ್ ಅನುಮತಿ ಪಡೆದುಕೊಳ್ಳಬೇಕಾಗಿದೆ .
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












