ಸನ್ಮಾರ್ಗ ವಾರ್ತೆ
ಅಲಹಾಬಾದ್, ಎ. 26: ಮುಂಬಯಿಯಿಂದ ಅಲಹಾಬಾದಿನಲ್ಲಿರುವ ಮನೆಗೆ ಹೋಗಬೇಕು. ಆದರೆ ಹೇಗೆ? ಒಂದು ಲಾರಿಯನ್ನು ಬಾಡಿಗೆ ಪಡೆದುಕೊಂಡ. 25 ಟನ್ ಈರುಳ್ಳಿಯನ್ನೂ ಖರೀದಿಸಿದ. ಹೀಗೆ ಅಲಹಾಬಾದಿನ ಮನೆಗೂ ತಲುಪಿದ. ಇದು ಉತ್ತರ ಪ್ರದೇಶ ಅಲಹಾಬಾದಿನ ನಿವಾಸಿ ಪ್ರೇಮ್ ಮೂರ್ತಿ ಪಾಂಡೆಯ ಕತೆ.
ಈತ ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಾರೆ. ಲಾಕ್ ಡೌನ್ನ ಮೊದಲ ಹಂತದಲ್ಲಿ ಆತ ಮುಂಬೈಯಲ್ಲಿಯೇ ವಾಸಿಸಿದ್ದರು. ಆದರೆ ಲಾಕ್ ಡೌನ್ ಮುಂದುವರಿದು ಪ್ರದೇಶದಲ್ಲಿ ಕೊರೊನಾ ರೋಗ ಹೆಚ್ಚಿದ್ದರಿಂದ ಮುಂಬೈಯಿಂದ ಊರಿಗೆ ಹೋಗಬೇಕೆಂದು ಪಾಂಡೆ ನಿರ್ಧರಿಸಿದ. ಆದರೆ ಹೇಗೆ ಹೋಗುವುದು? ಅಗತ್ಯ ವಸ್ತುಗಳ ಸಾಗಾಟಕ್ಕೆ ಲಾಕ್ ಡೌನ್ ವೇಳೆ ಪೊಲೀಸರು ಅಡ್ಡಿಪಡಿಸುವುದಿಲ್ಲ ಎಂದು ಅರಿತುಕೊಂಡ ಪಾಂಡೆ ಎಪ್ರಿಲ್ ಹದಿನೇಳರದಂದು ಒಂದು ಮಿನಿ ಟ್ರಕ್ ಬಾಡಿಗೆ ತೆಗೆದುಕೊಂಡು ಅಲ್ಲಿಂದ ನಾಸಿಕ್ಗೆ ಬಂದು 10,000 ರೂಪಾಯಿ ಕಲ್ಲಂಗಡಿ ಖರೀದಿಸಿದ್ದಾರೆ. ಅಲ್ಲಿಂದ ನೀರುಳ್ಳಿಗೆ ಪ್ರಸಿದ್ಧವಾಗಿರುವ ನಾಸಿಕ್ನ ಪಿಂಪಲ್ ಗನ್ ಮಾರುಕಟ್ಟೆಯಿಂದ 9.10 ರೂಪಾಯಿಯಂತೆ 25,520 ಕಿಲೊ ಈರುಳ್ಳಿ ಖರೀದಿಸಿದ. ಅಲ್ಲಿಂದಲೂ ಒಂದು ಟ್ರಕ್ ಬಾಡಿಗೆ ಪಡೆದು 1200 ಕಿಲೋಮೀಟರ್ ದೂರದ ಅಲಹಾಬಾದಿಗೆ ಹೊರಟ. ಎಪ್ರಿಲ್ 20ಕ್ಕೆ ನಾಸಿಕ್ನಿಂದ ಹೊರಟ ಟ್ರಕ್, ಎಪ್ರಿಲ್ 23ರಂದು ಮುಂಡರ ಮಾರ್ಕೆಟ್ ಗೆ ತಲುಪಿದ.
ಆದರೆ, ಅಲ್ಲಿನ ಮಾರುಕಟ್ಟೆಯಿಂದ ಯಾರೂ ಈರುಳ್ಳಿ ಖರೀದಿಸಲು ಸಿದ್ಧರಾಗಲಿಲ್ಲ. ನಂತರ ಸಮೀಪದ ಇನ್ನೊಂದು ಗ್ರಾಮದ ಮಾರುಕಟ್ಟೆಗೆ ಲಾರಿ ಓಡಿಸಿದ. ಒಳ್ಳೆಯ ಬೆಲೆ ಕೊಟ್ಟು ಈರುಳ್ಳಿ ಖರೀದಿಸಲು ಬರುತ್ತಾರೆ ಎನ್ನುವ ವಿಶ್ವಾಸದಲ್ಲಿ ಪಾಂಡೆ ಇದ್ದಾರೆ. ಅಲಹಾಬಾದಿಗೆ ತಲುಪಿದ ಬಳಿಕ ಸಮೀಪದ ಪೊಲೀಸ್ ಠಾಣೆಯಲ್ಲಿ ವಿವರ ನೀಡಿದ್ದಾರೆ. ಆರೋಗ್ಯ ಕಾರ್ಯಕರ್ತರು ವೈದ್ಯಕೀಯ ತಪಾಸಣೆಯನ್ನೂ ಮಾಡಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












