ಬೆಂಗಳೂರು: 18 ಆಸ್ಪತ್ರೆಗಳಿಗೆ ಅಲೆದರೂ ಸಿಗದ ಚಿಕಿತ್ಸೆ; ಆಸ್ಪತ್ರೆ ವರಾಂಡದಲ್ಲಿ ಬಿದ್ದು ರೋಗಿಯ ಸಾವು

0
396

ಸನ್ಮಾರ್ಗ ವಾರ್ತೆ

ಬೆಂಗಳೂರು,ಜು.4: ಸಹೋದರನೊಂದಿಗೆ ದಿನೇಶ್ ಸುಜಾನಿ ಹದಿನೆಂಟು ಆಸ್ಪತ್ರೆಗಳಿಗೆ ಸುತ್ತಾಡಿದ್ದಾರೆ. ಯಾರೂ ಚಿಕಿತ್ಸೆಗೆ ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ತನ್ನ ಸಹೋದರ ಭವಾರಿಲಾಲ್ ಸುಜಾನಿ(52) ಆಸ್ಪತ್ರೆಯ ವರಾಂಡದಲ್ಲಿ ಮೃತಪಟ್ಟು ಬೀಳುವುದಕ್ಕೆ ಮೂಕ ಸಾಕ್ಷಿಯಾಗಿ ದಿನೇಶ್ ನಿಲ್ಲಬೇಕಾಯಿತು.

ಬೆಂಗಳೂರಿನಲ್ಲಿ ನಡೆದ ಘಟನೆ ಇದು. ಇದು ಬಹಿರಂಗವಾದ ನಂತರ ಆಸ್ಪತ್ರೆಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಚಿಕಿತ್ಸೆ ನಿರಾಕರಿಸಿದ ಸಾಲಿನಲ್ಲಿ ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳೂ ಸೇರಿವೆ.

ಭವಾರಿಲಾಲ್‍ರಿಗೆ ತೀವ್ರ ಜ್ವರ, ಶೀತವಿತ್ತು.ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವರ ಪಲ್ಸ್ ಕಡಿಮೆಯಾಗುತ್ತಿದೆ. ವಾಂತಿ ಇದೆ ಎಂದು ಆಸ್ಪತ್ರೆಯಯವರಿಗೆ ದಿನೇಶ್ ಹೇಳಿದ್ದರು. ಅವರು ರೋಗಿಯನ್ನು ಒಳಗೆ ಕರೆದುಕೊಂಡು ಹೋಗಿ ಎಕ್ಸ್‌ ರೇ ತೆಗೆದರು. ನಂತರ ಇನ್ನೆಲ್ಲಿಗಾದರೂ ಕೊಂಡು ಹೋಗಿ ಎಂದರು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಯಾರೂ ಚಿಕಿತ್ಸೆ ಕೊಡಲು ಮುಂದಾಗಲಿಲ್ಲ. ಬಾಗಿಲಿನಿಂದಲೇ ಹೋಗಿ ಎಂದು ಹಿಂದೆ ಕಳುಹಿಸಿದರು.

ಓಡಾಟದಲ್ಲಿ ಹದಿನೆಂಟು ಆಸ್ಪತ್ರೆಗೆ ಹೋದರು. 32 ಆಸ್ಪತ್ರೆಗಳಿಗೆ ಕರೆ ಮಾಡಿದರು. ಎಲ್ಲರೂ ರೋಗಿಯನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ನಾವು ಸ್ವಾಬ್ ಟೆಸ್ಟ್ ಮಾಡಲು ಸೂಚಿಸಿದ್ದು, ಅದಕ್ಕಾಗಿ ಸರಕಾರಿ ಆಸ್ಪತ್ರೆಗೆ ಹೋಗಲು ಹೇಳಿದೆವು ಒಂದು ವೈದ್ಯರು ಹೇಳಿದರು. ಕರ್ನಾಟಕದಲ್ಲಿ ಕೊರೋನ ರೋಗಿಗಳ ಸಂಖ್ಯೆ ಹೆಚ್ಚುವುದು ಸಂಕಷ್ಟ ತಂದಿದೆ. ಬೆಂಗಳೂರು ನಗರದಲ್ಲಿ ಕೊರೋನ ದೃಢಪಟ್ಟ 732 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲಯಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.