ಐಸ್‍ಕ್ರೀಂ ಕೊಡಿಸುವ ನೆಪದಲ್ಲಿ ಬಾಲಕಿಯ ಅಪಹರಣ: ದಂಪತಿಗಳ ಬಂಧನ

0
418

ಸನ್ಮಾರ್ಗ ವಾರ್ತೆ

ಕೇರಳ,ಅ.1: ಐಸ್‍ಕ್ರೀಂ ಕೊಡಿಸುತ್ತೇವೆ ಎಂದು ಬೆಂಗಳೂರಿನಿಂದ ಐದು ವರ್ಷದ ಬಾಲಕಿಯನ್ನು ಕದ್ದು ತಂದು ಕಳಿಯಿಕಾವ್ ಬಸ್ ಸ್ಟಾಂಡಿನಲ್ಲಿ ಅಲೆದಾಡುತ್ತಿದ್ದ ದಂಪತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೋಸೆಫ್ ಜಾನ್(55) ಮತ್ತು ಪತ್ನಿ ಎಸ್ತರ್(48) ಬಾಲಕಿಯನ್ನು ಅಪಹರಿಸಿದವರು. ಇವರ ಜೊತೆಯಲ್ಲಿ ಬಾಲಕಿಯ ಜೊತೆಗೆ ಜೋಸೆಫ್‍ನ ಮೊದಲ ಪತ್ನಿಯ ಎಂಟು ವರ್ಷದ ಮಗನೂ ಇದ್ದ. ಮಂಗಳವಾರ ರಾತ್ರೆ ಕಳಿಯಿಕ್ಕಾವ್ ಬಸ್ ಸ್ಟಾಂಡ್‍ನಲ್ಲಿ ದಂಪತಿಗಳ ಜೊತೆಗಿದ್ದ ಐದು ವರ್ಷದ ಬಾಲಕಿ ನಿರಂತರ ಆಳುವುದನ್ನು ನೋಡಿದ ಪೊಲೀಸರು ದಂಪತಿಯನ್ನು ಪೊಲೀಸ್ ಠಾಣೆಗೆ ಕೊಂಡು ಹೋಗಿ ವಿಚಾರಿಸಿದಾಗ ಮಗು ಕಳ್ಳತನ ವಿವರ ಬಹಿರಂಗವಾಗಿದೆ.

ಪೊಲೀಸರಿಗೆ ಕಳೆದ 18ನೇ ತಾರೀಕಿಗೆ ಬೆಂಗಳೂರಿನ ಮೆಜೆಸ್ಟಿಕ್ ಸಮೀಪದಿಂದ ಹೆಣ್ಣುಮಗು ಕಾಣೆಯಾಗಿರುವುದು ಮೆಜೆಸ್ಟಿಕ್ ಪೊಲೀಸರಿಗೆ ದೂರು ಬಂದಿತ್ತು. ಈ ಮಗುವಿನ ಫೋಟೊವನ್ನು ಕಳುಹಿಸಿಕೊಟ್ಟಾಗ ಕಾಣೆಯಾದ ಮಗು ಇದು ಎಂಬುದು ತಿಳಿದು ಬಂದಿದೆ. ನಂತರ ಪೊಲೀಸರು ಇಬ್ಬರು ಮಕ್ಕಳನ್ನೂ ನಾಗರಕೊವಿಲ್ ಶಿಶುಸಂರಕ್ಷಣಾ ಕೇಂದ್ರದಲ್ಲಿರಿಸಿದರು.

ಜೋಸೆಫ್ ಜೋನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದ. ಬೆಂಗಳೂರಿನಲ್ಲಿ ಎಸ್ತರ್ ಎಂಬಾಕೆಯನ್ನು ಮದುವೆಯಾಗಿದ್ದ. ಮಗುವಿನ ಸಂಬಂಧಿಕರು ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದು. ಅವರು ಆಗಮಿಸಿದ ನಂತರವೇ ಹೆಚ್ಚಿನ ವಿವರಗಳು ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.