ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಡಿಸೆಂಬರ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಅಲಿಗಢ ಮುಸ್ಲಿಂ ವಿವಿಯ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿಯನ್ನು ಉತ್ತರ ಪ್ರದೇಶದ ಅಝಂಗರ್ ನಿಂದ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಯಾವ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ.
ಬಂಧನಕ್ಕೆ ಸಂಬಂಧಿಸಿ ಅಝಂಗರ್ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ದಿ ಕ್ವಿಂಟ್ ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಉಸ್ಮಾನಿಯನ್ನು ಬಂಧಿಸಿದ್ದು ಯಾರು ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಆದರೆ, ಭಯೋತ್ಪಾದನೆ ನಿಗ್ರಹ ಪಡೆ ಶರ್ಜೀಲ್ ಅವರನ್ನು ಬಂಧಿಸಿದೆ ಎಂದು ಹೆಚ್ಚುವರಿ ಎಸ್ಪಿ ಅರವಿಂದ್ ಕುಮಾರ್ ಹೇಳಿದ್ದಾಗಿ ಅಮರ್ ಉಜಾಲಾ ವರದಿ ಮಾಡಿದೆ.
ಆತನ ಲ್ಯಾಪ್ ಟಾಪ್, ಎಲ್ಲ ಪುಸ್ತಕಗಳು ಮತ್ತು ಬಟ್ಟೆ ಬರೆಗಳನ್ನು ವಶಕ್ಕೆ ಪಡೆದಿದ್ದು ಎಲ್ಲರ ಭಾವಚಿತ್ರ ಸೆರೆಹಿಡಿದು ಸಂಬಂಧಿಕರು ಎಂದು ದಾಖಲಿಸಿಕೊಳ್ಳಲಾಗಿದೆ ಎಂದು ಅರೀಬ್ ವಿವರಿಸಿದ್ದಾರೆ.
ಉಸ್ಮಾನಿಯರ ತಂದೆ ಮತ್ತು ತಾಯಿ ಬಂಧನ ಕುರಿತು ಆತಂಕ ವ್ಯಕ್ತಪಡಿಸಿದ್ದು, ಮಗನಿಗೆ ಮಾತನಾಡಲಿಕ್ಕೂ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












