ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.26: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 17,296 ಮಂದಿಗೆ ಕೊರೋನ ಸೋಂಕು ತಗಲಿದೆ ಎಂದು ವರದಿಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕು ಪೀಡಿತರ ಒಟ್ಟು ಸಂಖ್ಯೆ 4,90,401ಕ್ಕೆ ಏರಿಕೆಯಾಗಿದೆ. 1,89,463 ಮಂದಿ ಚಿಕಿತ್ಸೆ ಪಡೆಯುತ್ತಿದ್ದು 2,85,637 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.
ಹೊಸದಾಗಿ 15,301 ಮಂದಿಗೆ ರೋಗ ಬಾಧಿಸಿದೆ. ಕಳೆದ 24 ಗಂಟೆಗಳಲ್ಲಿ 13,490 ಮಂದಿ ರೋಗದಿಂದ ಮುಕ್ತರಾಗಿದ್ದು, ದೇಶದಲ್ಲಿ ರೋಗದಿಂದ ಗುಣಮುಖಗೊಂಡವರ ದರ ಶೇ.58.24 ಆಗಿದೆ. ಮಹಾರಾಷ್ಟ್ರ, ದಿಲ್ಲಿ, ತಮಿಳ್ನಾಡು, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಕೊರೋನ ಸೋಂಕ ಪ್ರಕರಣಗಳು ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ 1,47,741 ಮಂದಿಗೆ ರೋಗ ದೃಢವಾಗಿದೆ. 6,931 ಮಂದಿ ಇಲ್ಲಿ ಕೊರೋನಕ್ಕೆ ಬಲಿಯಾಗಿದ್ದಾರೆ. ದಿಲ್ಲಿ,ಮುಂಬೈ ನಗರಗಳು ಕೊರೋನದಿಂದ ಹೆಚ್ಚು ನಾಶನಷ್ಟ ಅನುಭವಿಸಿವೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












