ಸನ್ಮಾರ್ಗ ವಾರ್ತೆ
ಡೊಡೊಮ,ಜೂ.26: ಆಫ್ರಿಕನ್ ದೇಶ ಟಾನ್ಸಾನಿಯದ ಗಣಿಗಳಲ್ಲಿ ಕೆಲಸ ಮಾಡುವ ವೇಳೆ ಮಹಿಳೆಯರಿಗೆ ಅಮೂಲ್ಯ ರತ್ನಗಳು ಸಿಕ್ಕಿವೆ. ಸನಿನಿಯ ಲೈಸರ್ ಎಂಬವರಿಗೆ ಕೊಟ್ಯಂತರ ಬೆಲೆ ಬಾಳುವ ಎರಡು ಅಪೂರ್ವ ರತ್ನದ ಕಲ್ಲುಗಳು ಲಭಿಸಿದೆ. ಟಾನ್ಸಾನಿಯದ ಉತ್ತರದ ಮಾನ್ಯಾರೊ ಪ್ರದೇಶದಲ್ಲಿ ನಡೆದ ಘಟನೆ ಇದು. ತನಗೆ ಲಭಿಸಿದ ವಯಲೆಟ್ ಬಣ್ಣದ ರತ್ನದ ಕುರಿತು ಸರಕಾರಕ್ಕೆ ತಿಳಿಸಿದ ಸನಿನಿಯಗೆ ಸರಕಾರ 774 ಬಿಲಿಯನ್ ಟಾನ್ಸಾನಿಯನ್ ಶಿಲ್ಲಿಂಗ್ ನೀಡಿದೆ(ಭಾರತದ ಸುಮಾರು 25 ಕೋಟಿ ರೂಪಾಯಿ)
ಇದುವರೆಗೆ ಟಾನ್ಸಾನಿಯದಿಂದ ಲಭಿಸಿದ ಅತಿದೊಡ್ಡ ರತ್ನದ ಕಲ್ಲುಗಳಿವು. ಒಂದು ರತ್ನ 9.27 ಕಿಲೊ ಇದೆ. ಇನ್ನೊಂದು 5.103 ಕಿಲೊ ಗ್ರಾಮ್ ಇದೆ. ದೇಶದ ಟೆಲಿವಿಷನ್, ಸಾಮಾಜಿಕ ಮಾಧ್ಯಮಗಳಲ್ಲಿ ಸನಿನಿಯು ಈಗ ತಾರೆಯಾಗಿದ್ದಾರೆ. ಕೋಟ್ಯಧಿಪತಿಯಾದ ಸಂತೋಷದಲ್ಲಿ ತನ್ನ ಗ್ರಾಮದಲ್ಲಿ ಹಬ್ಬ ಮಾಡಲು ಸನಿನಿಯು ಸಿದ್ಧರಾಗಿದ್ದು, ಸಿಕ್ಕ ಹಣದಿಂದ ಊರಿಗೆ ಶಾಲೆ, ಶಾಪಿಂಗ್ ಮಾಲ್ ಕಟ್ಟಿಸುವ ಯೋಜನೆಯನ್ನು ಕೂಡ ಹಾಕಿಕೊಂಡಿದ್ದಾರೆ.
ಟಾನ್ಸಾನಿಯ ದೇಶ ಶ್ರೀಮಂತವಾಗುವ ಲಕ್ಷಣ ಇದು ಎಂದು ಎರಡು ಕಲ್ಲುಗಳು ಸಿಕ್ಕಿದ ಬಗ್ಗೆ ಅಧ್ಯಕ್ಷ ಜಾನ್ ಮಗುಫುಲಿ ಹೇಳಿದ್ದಾರೆ. ಪತ್ರಿಕಾಗೋಷ್ಟೀಯಲ್ಲಿ ಸನಿನಿಯುವರನ್ನು ಕರೆದು ಅಧ್ಯಕ್ಷರು ಅಭಿನಂದನೆ ಸಲ್ಲಿಸಿದ್ದಾರೆ. ಟಾನ್ಸಾನಿಯದ ಉತ್ತರ ಭಾಗ ರತ್ನ ಕಳ್ಳಸಾಗಾಟಕ್ಕೆ ಹೆಸರು ವಾಸಿಯಾದ ಸ್ಥಳವಾಗಿದ್ದು, ದೇಶದಲ್ಲಿ ಗಣಿಗಾರಿಕೆ ಆಗುವ ರತ್ನಗಳಲ್ಲಿ ಅರ್ಧದಷ್ಟು ನಷ್ಟವಾಗುತ್ತಿವೆ ಎಂದು ಅಧ್ಯಕ್ಷರು ತಿಳಿಸಿದರು. ಕಳ್ಳ ಸಾಗಾಟ ತಡೆಯಲು 2018ರಲ್ಲಿ ಈ ಕ್ಷೇತ್ರದಲ್ಲಿ ದೊಡ್ಡ ಗೋಡೆಯನ್ನು ನಿರ್ಮಿಸಲಾಗಿತ್ತು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












