ಕೊರೋನಾ ಯೋಧರ ಗೌರವಾರ್ಥ ಕೋಲ್ಕತ್ತಾದಲ್ಲಿ ಕೊರೋನಾ ಮ್ಯೂಸಿಯಂ

0
291

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಕೊರೋನಾ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದ್ದ ಯೋಧರ ಗೌರವಾರ್ಥ ಕೋಲ್ಕತ್ತಾದಲ್ಲಿ ಕೋವಿಡ್ ಮ್ಯೂಸಿಯಂ ಸ್ಥಾಪನೆಯಾಗಲಿದೆ.

ಒಂದು ವರ್ಷದಿಂದ ಕೊರೋನಾ ಹೋರಾಟದಲ್ಲಿ ಜೀವ ಕಳಕೊಂಡ ಮುಂಚೂಣಿ ಯೋಧರ ಗೌರವಾರ್ಥ ಮ್ಯೂಸಿಯಂ ಸ್ಥಾಪನೆಯಾಗುತ್ತಿದೆ.

ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಸಾನಿಸೈಟಸರ್ ಇತ್ಯಾದಿ ಅಗತ್ಯ ವಸ್ತುಗಳು ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಪಶ್ಚಿಮ ಬಂಗಾಳದ ವೈದ್ಯರ ಫೋರಂ ನ ಪದಾಧಿಕಾರಿ ಡಾ. ರಾಜೀವ್ ಪಾಂಡೆ ತಿಳಿಸಿದರು.

ಸರಕಾರಕ್ಕೆ ಮ್ಯೂಸಿಯಂನ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮತಿಗೆ ಕಾಯುತ್ತಿದ್ದೇವೆ. ನೂರಕ್ಕೂ ಹೆಚ್ಚು ವರ್ಷಗಳ ನಂತರ ಒಂದು ಮಹಾಮಾರಿ ಹರಡಿದೆ. ನಮ್ಮ ಹಿರಿಯರು ಕೂಡ ಇಂತಹದೊಂದು ಕಾಲಘಟ್ಟಕ್ಕೆ ಸಾಕ್ಷಿಯಾಗಿಲ್ಲ ಎಂದು ರಾಜೀವ್ ಪಾಂಡೆ ಹೇಳಿದರು.

ಕೊರೋನಾ ಇರುವ ರಾಜ್ಯಗಳಲ್ಲಿ ಸುಮಾರು 90 ವೈದ್ಯರು ಮೃತಪಟ್ಟಿದ್ದಾರೆ. ಇತರರಂತೆ ಈ ಸಮಯವೂ ಇದರಲ್ಲಿ ಹೋರಾಡಿದವರನ್ನು ಸ್ಮರಿಸಲಾಗುವುದು. ಇವರ ತ್ಯಾಗಗಳನ್ನು ಮುಂದಿನ ತಲೆಮಾರಿಗೆ ನೆನಪಿಸುವಂತಾಗಬೇಕು. ಅವರು ಮರೆಯಬಾರದು. ಈ ಹಿನ್ನೆಲೆಯಲ್ಲಿ ಮ್ಯೂಸಿಯಂ ಮಾಡುವುದಕ್ಕೆ ನಾವು ಪ್ರಸ್ತಾಪ ಸಲ್ಲಿಸಲು ಕಾರಣವೆಂದು ಅವರು ಹೇಳಿದರು.