ಇದು ಹೇಡಿಗಳ ಸರಕಾರ; ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರಿಯಾಂಕಾ ಗಾಂಧಿ

0
1017

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 16: ಪೌರತ್ವ ತಿದ್ದುಪಡಿ ಕಾನೂನನ್ನು ಪ್ರತಿಭಟಿಸಿದ ಜಾಮಿಅ ಮಿಲ್ಲಿಯ ಯುನಿವರ್ಸಿಟಿಯ ವಿದ್ಯಾರ್ಥಿಗಳನ್ನು ಕ್ರೂರವಾಗಿ ದೌರ್ಜನ್ಯಕ್ಕೆ ಗುರಿಪಡಿಸಿದ ದಿಲ್ಲಿ ಪೊಲೀಸರ ಕ್ರಮವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರೋಧಿಸಿ ಕೇಂದ್ರ ಸರಕಾರವನ್ನು ಹೇಡಿಗಳ ಸರಕಾರ ಎಂದು ಟೀಕಿಸಿದ್ದಾರೆ. ವಿಶ್ವವಿದ್ಯಾನಿಲಯದ ಒಳಗೆ ಹೋಗಿ ವಿದ್ಯಾರ್ಥಿಗಳನ್ನು ಕ್ರೂರವಾಗಿ ಪೊಲೀಸರು ಹೊಡೆದಿದ್ದಾರೆ. ಜನರು ಏನು ಹೇಳುತ್ತಿದ್ದಾರೆ ಎಂದು ಕೇಳಲು ಸಿದ್ಧವಾಗಬೇಕಿದ್ದ ಸಮಯದಲ್ಲಿ ಪೊಲೀಸರನ್ನು ಉಪಯೋಗಿಸಿ ಪ್ರತಿಭಟನೆಗಳನ್ನು ದಮನಿಸಲು ಬಿಜೆಪಿ ಸರಕಾರ ಮುಂದಾಯಿತು. ಇದು ಹೇಡಿಗಳ ಸರಕಾರ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಇದು ನರೇಂದ್ರ ಮೋದಿಗಿರುವ ಮುನ್ನೆಚ್ಚರಿಕೆಯಾಗಿದೆ. ಯುವಕರ ಪ್ರತಿಭಟನೆಗಳನ್ನು ದಮನಿಸಲು ಪೊಲೀಸರಿಂದ ಸಾಧ್ಯವಿಲ್ಲ. ಜನರ ಧ್ವನಿಗೆ ಸರಕಾರ ಹೆದರುತ್ತಿದೆ. ಸರ್ವಾಧಿಕಾರಿಯಂತೆ ಸರಕಾರ ಪ್ರತಿಭಟನೆಯನ್ನು ದಮನಿಸಲು ನೋಡುತ್ತಿದೆ ಎಂದು ಪ್ರಿಯಾಂಕ ಗಾಂಧಿ ಹೇಳಿದರು.