ಎಸ್‌ಐಓ ನಿಯೋಗದಿಂದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್‌‌ ಭೇಟಿ

0
547

ಸನ್ಮಾರ್ಗ ವಾರ್ತೆ

ಬೆಂಗಳೂರು: ಎಸ್‌ಐಓ ಕರ್ನಾಟಕ ರಾಜ್ಯ ಘಟಕದ ನಿಯೋಗವು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಅವರನ್ನು ಭೇಟಿಯಾಗಿ ಶಿಕ್ಷಣಕ್ಕೆ ಸಂಬಂಧಿಸಿ ವಿವಿಧ ವಿಷಯಗಳಲ್ಲಿ ವಿಸ್ತೃತ ಚರ್ಚೆ ನಡೆಸಿತು

ಮುಖ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಕ್ಕೆ ರಾಜ್ಯ ಸರಕಾರ ಹೊರಟಿದ್ದು ಈ ಬಗ್ಗೆ ತನ್ನ ನಿಲುವನ್ನು ಸಚಿವರೊಂದಿಗೆ ನಿಯೋಗ ಹಂಚಿಕೊಂಡಿತು. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಎಸ್‌ಐಓ ತನ್ನ ಭಿನ್ನಮತಗಳನ್ನು ವ್ಯಕ್ತಪಡಿಸಿದ್ದು ಅವುಗಳನ್ನು ಸಚಿವರೊಂದಿಗೆ ನಿಯೋಗ ಹಂಚಿಕೊಂಡಿತು.

ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಇತ್ತೀಚೆಗೆ ಎಸ್‌ಐಓ ಕಚೇರಿಯಲ್ಲಿ ದುಂಡುಮೇಜಿನ ಸಭೆ ನಡೆಸಲಾಗಿದ್ದು ಅದರಲ್ಲಿ ಅಂಗೀಕರಿಸಲಾದ ಠರಾವಿನ ಪ್ರತಿಯನ್ನು ಶಿಕ್ಷಣ ಸಚಿವರಿಗೆ ನೀಡುವ ಮೂಲಕ ಈ ಬಗ್ಗೆ ಗಮನಹರಿಸುವಂತೆ ಮತ್ತು NEPಯನ್ನು ಜಾರಿಗೊಳಿಸುವ ಮೊದಲು ಸೂಕ್ತ ಬದಲಾವಣೆಗಳನ್ನು ತರುವಂತೆ ಸಚಿವರಲ್ಲಿ ವಿನಂತಿಸಿತು.

ನಿಯೋಗದಲ್ಲಿ ಎಸ್ ಐ ಓ ರಾಜ್ಯ ಕಾರ್ಯದರ್ಶಿ ಆಸಿಮ್ ಜವಾದ್, ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಪೀರ್ ಲಟಗೇರಿ, ನಾಸೀರ್ ಹೂಡೆ ಉಪಸ್ಥಿತರಿದ್ದರು.