ಚೀನ, ಪಾಕಿಸ್ತಾನದ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಲಿ- ಶಿವಸೇನೆ

0
476

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗಡಿ ರೇಖೆಯಲ್ಲಿ ನೆಲೆಸಿದ ಉದ್ವಿಗ್ನ ಪರಿಸ್ಥಿತಿಯ ನಡುವೆ ಬುಧವಾರ ಶಿವಸೇನೆ ಕೇಂದ್ರ ಸರಕಾರ ಕಠಿಣ ಕ್ರಮಕ್ಕೆ ಮುಂದಾಗದಿದ್ದರೆ ಚೀನ ಮತ್ತು ಪಾಕಿಸ್ತಾನ ಜೊತೆಯಾಗಿ ಭಾರತದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡಬಹುದು ಎಂದಿದೆ. ಸಾಮ್ನಾದಲ್ಲಿ ಬಿಜೆಪಿಯ ಹೆಸರು ಉಲ್ಲೇಖಿಸದೆ ಪೊಲಿಟಿಕಲ್ ಈಸ್ಟ್ ಇಂಡಿಯಾ ಕಂಪೆನಿ ಎಂದು ಹೇಳಲಾಗಿದ್ದು ಚೀನ ನಿರಂತರ ನುಸುಳು ಕೋರತನ ಪ್ರದರ್ಶಿಸುತ್ತಿದೆ. ಭಾರತ ಮಾತುಕತೆಯಲ್ಲಿ ವ್ಯಸ್ತವಾಗಿದೆ ಎಂದು ಬರೆಯಲಾಗಿದೆ.

ಚೀನ ಅಗ್ರ ಸಾಮ್ರಾಜ್ಯವಾದಿ ದೇಶವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಹಿಂದೂ ಸಿಖ್ಖರ ಮೇಲೆ ನಡೆದ ದಾಳಿಯನ್ನು ಎತ್ತಿದ ಪತ್ರಿಕೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಇದೆ. ಕಣಿವೆಯ ಹಿಂದೂಗಳು ಪಲಾಯನ ಮಾಡುತ್ತಿವೆ ಎಂದಿದೆ. ಇದು ಭಾಜಪದಂತಹ ಪಾರ್ಟಿಗೆ ಶೋಭೆಯಲ್ಲ. ಅದು ಹಿಂದುತ್ವವನ್ನು ಬೆಂಬಲಿಸುವ ಪಾರ್ಟಿ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂದ ಮೇಲೆ ಕಾಶ್ಮೀರದಲ್ಲಿ ಹಿಂಸಾತ್ಮಕ ಘಟನೆ ಹೆಚ್ಚಿದೆ.

ಭಾರತ ಚೀದ ನಡುವಿನ ಘರ್ಷಣೆಯನ್ನು ಉಲ್ಲೇಖಸಿದ ಪತ್ರಿಕೆಯು ಚೀನದೊಂದಿಗೆ 13 ಸುತ್ತಿನ ಮಾತುಕತೆಯಾಗಿದೆ ಆದರೂ ಫಲಿತಾಂಶವಿಲ್ಲ. ಚೀನ ರಚನಾತ್ಮಕ ಬದಲಾವಣೆಗೆ ಸಿದ್ಧವಾಗಿಲ್ಲ. ಕಾಶ್ಮೀರದಲ್ಲಿ ಪಾಕಿಸ್ತಾನದ ಪ್ರತಿಯೊಂದು ಕೃತ್ಯಕ್ಕೂ ಚೀನದ ಬೆಂಬಲವಿದೆ. ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದೆ. ಅವರಿಗೂ ಚೀನದ ಬೆಂಬಲವಿದೆ‌.

ಚೀನ-ಪಾಕಿಸ್ತಾನ ಜೊತೆಯಾಗಿ ಬಂದರೆ ಭಾರತದ ಅಸ್ತಿತ್ವಕ್ಕೆ ಅಪಾಯ ಸೃಷ್ಟಿಯಾದೀತು. ದೇಶದ ಪಾಲಿಟಿಕಲ್ ಈಸ್ಟ್ ಇಂಡಿಯಾ ಕಂಪೆನಿ ಇದನ್ನು ಅರಿಯಬೇಕು ಎಂದು ಸಾಮ್ನಾ ಎಚ್ಚರಿಸಿದೆ. ಕಳೆದ 17 ತಿಂಗಳಿನಿಂದ ಪೂರ್ವ ಲಡಾಕ್‍ನಲ್ಲಿ ಘರ್ಷಣೆ ಸ್ಥಿತಿ ಇದೆ. ಹದಿಮೂರು ಸುತ್ತಿನ ಮಾತುಕತೆಯಿಂದ ಯಾವುದೇ ಪರಿಹಾರ ದೊರೆತಿಲ್ಲ ಎಂದು ಸಾಮ್ನಾ ಟೀಕಿಸಿದೆ.