ಹಿಂದೂಸ್ತಾನ್ ಮೇ ರೆಹನಾ ಹೋಗ, ಜೈ ಶ್ರೀರಾಮ್ ಕೆಹನಾ ಹೋಗಾ: ಜಂತರ್ ಮಂತರ್‌ನಲ್ಲಿ ಕೋಮುವಾದಿ ಘೋಷಣೆ; ಎಫ್ ಐಆರ್ ದಾಖಲಿಸಿದ ದೆಹಲಿ ಪೊಲೀಸ್

0
659

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕೋಮುವಾದಿ ಘೋಷಣೆ ಕೂಗಿದವರ ವಿರುದ್ಧ ದಿಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ರವಿವಾರ ಕೇಸಿಗೆ ಕಾರಣವಾದ ಘಟನೆ ನಡೆದಿತ್ತು. ಜಯ್ ಶ್ರೀರಾಂ ಘೋಷಣೆ ಕೂಗುತ್ತಾ ಬಂದವರು ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ನಂತರ ವೀಡಿಯೊದಲ್ಲಿರುವವರ ವಿರುದ್ಧ ಕನೌಟ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.

ವಸಾಹತುಶಾಹಿ ಕಾಲಘಟ್ಟದ ಕಾನೂನುಗಳ ವಿರುದ್ಧ ವಿರೋಧಿಸಲು ದಿಲ್ಲಿಯ ಜಂತರ್ ಮಂತರ್‌ ಗೆ ಬಂದವರು “ಹಿಂದೂಸ್ತಾನ್ ಮೇ ರೆಹನಾ ಹೋಗ, ಜೈ ಶ್ರೀ ರಾಮ್ ಕೆಹೆನಾ ಹೋಗಾ (ಭಾರತದಲ್ಲಿ ಉಳಿಯಲು ಜೈ ಶ್ರೀರಾಮ್ ಎಂದು ಹೇಳಬೇಕು) ಎಂದು ಕೋಮುವಾದಿ ಘೋಷಣೆ ಕೂಗಿದ್ದರು. ಕಾರ್ಯಕ್ರಮವನ್ನು ಬಿಜೆಪಿಯ ಮುಖ್ಯಸ್ಥ ಅಶ್ವಿನ್ ಉಪಾಧ್ಯಾಯ ಸಂಘಟಿಸಿದ್ದರು. ಆದರೆ ವೀಡಿಯೊದಲ್ಲಿ ಕಾಣುತ್ತಿರುವರೊಡನೆ ತನಗೆ ಯಾವುದೇ ಸಂಬಂಧ ಇಲ್ಲ ಎಂದು ಅಶ್ವಿನ್ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ಹಾಕಿದ್ದಾರು.

ದಿಲ್ಲಿ ಪೊಲೀಸರಿಗೆ ಅಶ್ವಿನ್ ಪತ್ರ ಬರೆದು ತಾನು ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ಸ್ಥಳಕ್ಕೆ ತಲುಪಿದ್ದು. ಒಂದು ಗಂಟೆಯ ನಂತರ ಜನರು ಸೇರಿದ್ದರು. ಅಲ್ಲಿಂದ ನಾನು ಮರಳಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಅವರ ಹೆಸರು ಹೇಳಿ ವಿಡೀಯೊ ಪ್ರಚಾರ ಮಾಡಿ ತನ್ನ ಮಾನಹಾನಿ ಮಾಡಲಾಗುತ್ತಿದೆ ಎಂದು ಅವರು ಹೇಳುತ್ತಿದ್ದಾರೆ.