ಭರವಸೆಯಷ್ಟು ಮೈಲೇಜ್ ನೀಡದ ಟಾಟಾ ಕಂಪೆನಿಯ ವಿದ್ಯುತ್ ವಾಹನ ನೆಕ್ಸಾನ್ ಇವಿ: ಗ್ರಾಹಕನಿಂದ ದೂರು

0
582

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಟಾಟಾ ಕಂಪೆನಿಯ ವಿದ್ಯುತ್ ವಾಹನ ನೆಕ್ಸಾನ್ ಇವಿ ವಿರುದ್ಧ ಬಳಕೆದಾರರು ದೂರು ನೀಡಿದ್ದಾರೆ.

ಕಂಪೆನಿ ಕೊಟ್ಟ ಭರವಸೆಯಂತೆ ಮೈಲೇಜ್ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರಣ ಕೇಳಿ ಬಳಕೆದಾರರು ಟಾಟಾ ಕಂಪನಿಗೆ ನೋಟಿಸ್ ಕಳುಹಿಸಿದ್ದಾರೆ.

2020 ಡಿಸೆಂಬರ್ ಮೂರಕ್ಕೆ ವಾಹನ ನೋಂದಣಿಯಾಗಿತು. ಒಂದೇ ಸಲ ಚಾರ್ಜ್ ಮಾಡಿದರೆ 312 ಕಿಲೋ ಮೀಟರ್ ಸಂಚರಿಸುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಕಾರು 200 ಮೀಟರ್ ಕೂಡ ಓಡುತ್ತಿಲ್ಲ. ಮೈಲೇಜಿಗೆ ಡೀಲರ್ ಕೊಟ್ಟ ಸಲಹೆಗಳನ್ನು ಪಾಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಜಾಫ್‍ಗಡದಲ್ಲಿ ವಾಹನ ಖರೀದಿಸಿದ್ದ ವ್ಯಕ್ತಿಯೋರ್ವರು ದೂರಿದ್ದಾರೆ.

ಅವರು ಸಫ್ದರ್ ಜಂಗ್‍ನ ಡೀಲರ್ ನಿಂದ ವಾಹನವನ್ನು ಖರೀದಿಸಿದ್ದರು. ಫೆಬ್ರವರಿ ಹದಿನೈದರಂದು ಟ್ರಾನ್ಸ್‌ಪೋರ್ಟ್ ಡಿಪಾರ್ಟ್‍ಮೆಂಟ್ ಕಚೇರಿಯ ಮುಂದೆ ಹಾಜರಾಗಬೇಕೆಂದು ಕಂಪನಿಗೆ ನೋಟಿಸ್ ಸಿಕ್ಕಿದೆ ಎಂದು ಟಾಟಾ ಮೋಟಾರ್ಸ್ ವಕ್ತಾರ ತಿಳಿಸಿದ್ದಾರೆ.

ಬಳಕೆದಾರರ ಸಂದೇಹವನ್ನು ಪರಿಹರಿಸಿಕೊಡಲಾಗುವುದು ಮತ್ತು ಅಟೊಮೇಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ ಸರ್ಟಿಫಿಕೆಟ್ ಆಧಾರದಲ್ಲಿ ನೆಕ್ಸನ್ ಇವಿಗೆ ಫುಲ್ ಚಾರ್ಜ್ ಮಾಡಿದರೆ 312 ಕಿಲೊಮೀಟರ್ ಚಲಿಸುತ್ತದೆ ಎಂದು ಹೇಳಲಾಗಿತ್ತೆಂದು ಅವರು ತಿಳಿಸಿದರು.

ಏರ್ ಕಂಡಿಶನರ್ ಉಪಯೋಗಿಸುವುದು, ವೈಯಕ್ತಿಕ ಚಲಾವಣೆ ರೀತಿ, ರಸ್ತೆಯ ದುರವಸ್ಥೆ ಇದರಿಂದ ರೇಂಜ್‍ನಲ್ಲಿ ವ್ಯತ್ಯಾಸ ಆಗುತ್ತದೆ. ದಿಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಇವಿ ಪಾಲಿಸಿ ಪ್ರಕಾರ 1,50,000 ಮೂಲ ಬಂಡವಾಳದ ಇಲೆಕ್ಟ್ರಿಕ್ ಫೋರ್ ವ್ಹೀಲರ್ ಖರೀದಿಸಿದರೆ ಒಂದು ಕಿಲೊವ್ಯಾಟ್ ಸಾಮರ್ಥ್ಯಕ್ಕೆ 10,000 ರೂಪಾಯಿಯ ಪ್ರೋತ್ಸಾಹ ಸಿಗುತ್ತದೆ.