ದಿಲ್ಲಿಯ ಮುಸ್ಲಿಂ ವಿರೋಧಿ ಗಲಭೆಯನ್ನು ಖಂಡಿಸಿದ ಅಮೆರಿಕ

0
3084

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಫೆ. 27: ದಿಲ್ಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಗಲಭೆ ಆತಂಕ ತಂದಿದೆ ಎಂದು ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗ ತಿಳಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಭಾರತ ಸಂದರ್ಶನದ ವೇಳೆ ಮುಸ್ಲಿಮರನ್ನು ಗುರಿಮಾಡಿದ ಗಲಭೆಯನ್ನು ನಾವು ಖಂಡಿಸುತ್ತೇವೆ. ಮುಸ್ಲಿಮರನ್ನು ರಕ್ಷಿಸಲು ಭಾರತ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಟೊನಿ ಪರ್ಕಿನ್ಸ್ ಹೇಳಿದ್ದಾರೆ.

ದಿಲ್ಲಿಯ ಗಲಭೆ ವಿಷಾದ ತರಿಸಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟರೆಸ್ ವಕ್ತಾರ ಸ್ಟೆಫಾನಿ ದುಜಾರಿಕ್ ಹೇಳಿದರು. ಹಿಂಸಾಚಾರ ತಡೆಯುವ ಕ್ರಮ ಜರಗಿಸಬೇಕು. ಶಾಂತವಾಗಿ ಪ್ರತಿಭಟಿಸಲು ಅನುಮತಿಸಬೇಕು. ಸುರಕ್ಷಾ ಸೇನೆ ಸಂಯಮ ಪಾಲಿಸಬೇಕು. ದಿಲ್ಲಿಯ ಪರಿಸ್ಥಿತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಸ್ಟೆಫಾನಿ ದುಜಾರಿಕ್ ತಿಳಿಸಿದ್ದಾರೆ.