ಪ್ರವಾಹ ಪೀಡಿತರೊಂದಿಗೆ ದರ್ಪ ತೋರಿದ ಬಿಜೆಪಿ ಶಾಸಕ; ಬರೋದು ಬಿಡೋದು ನನ್ನಿಷ್ಟ ಎಂದರು- ಸಂತ್ರಸ್ತರು ಗರಂ

0
1211

ಧಾರವಾಡ: ಪ್ರವಾಹದಿಂದ ಜನರು ಕಂಗೆಟ್ಟು ಹೋಗಿದ್ದರೂ ಜನಪ್ರತಿನಿಧಿಗಳ ಉಡಾಫೆತನಕ್ಕೆ ಬ್ರೇಕ್ ಬಿದ್ದಿಲ್ಲ ಅನ್ನುವುದಕ್ಕೆ ಕಲಘಟಗಿ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರ್ ಮತ್ತೊಮ್ಮೆ ಪ್ರಾವೆಯಾಗಿ ಮೂಡಿ ಬಂದಿದ್ದಾರೆ. ಪ್ರವಾಹಕ್ಕೆ ಸಿಲುಕಿಕೊಂಡಿರುವ ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದ ಜನರೊಂದಿಗೆ ಅವರು ವರ್ತಿಸಿದ ರೀತಿ ವ್ಯಾಪಕ ಆಕ್ರೋಶಕ್ಕೆ ಕಾರಣವವಾಗಿದೆ.

ಒಂದು ವಾರದಿಂದ ತೀವ್ರ ಮಳೆ ಬಂದು ಪ್ರೆಆವಾಹ ಉಂಟಾಗಿದ್ದರೂ ಅಳ್ನಾವರ ತಾಲೂಕಿನ ಬೆಣಚಿ ಗ್ರಾಮಕ್ಕೆ ತಲೆ ಹಾಕಿ ಮಲಗದ ಶಾಸಕರು ಕೊನೆಗೂ ಭೇಟಿ ನೀಡಿದರು. ಸಂತ್ರಸ್ಥ ಜನರು ಸಹಜವಾಗಿ ಪ್ರಶ್ನೆ ಮಾಡಿದರು. ಈ ವೇಳೆ ಬರೋದು ಬಿಡೋದು ನನಗೆ ಬಿಟ್ಟ ವಿಚಾರ ಎಂದು ಅವರು ಸಂತ್ರಸ್ತರೊಂದಿಗೆ ಹೇಳಿದ್ದಾರೆ. ಇದಕ್ಕೆ ಸ್ಥಳೀಯರು ಸಿಟ್ಟಾಗುತ್ತಿರುವಂತೆಯೇ ಶಾಸಕ ತಮ್ಮ ಬೆಂಬಲಿಗರ ಜೊತೆ ವಾಪಸ್ ಆಗಿದ್ದಾರೆ ಎಂದು ವರದಿಯಾಗಿದೆ. ಪಬ್ಲಿಕ್ ಟಿವಿ ಈ ಬಗ್ಗೆ ವಿಡಿಯೋವನ್ನು ಪ್ರಸಾರ ಮಾಡಿದೆ.