ಮ್ಯಾನ್ಮಾರ್: ಸೇನೆಯ ವಿರುದ್ಧ ಹೋರಾಟಕ್ಕಿಳಿದ ವೈದ್ಯರು

0
471

ಸನ್ಮಾರ್ಗ ವಾರ್ತೆ

ಯಾಂಗೋನ್: ಮ್ಯಾನ್ಮಾರಿನಲ್ಲಿ ಸೈನಿಕಾಡಾಳಿತದ ವಿರುದ್ಧ ಜನರ ಹೋರಾಟದಲ್ಲಿ ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದ್ದಾರೆ. ಸೇನೆಯ ಆಡಳಿತ ಕೊನೆಗೊಳ್ಳಲಿ ಎಂದು ಘೋಷಣೆ ಕೂಗಿ ನೂರಾರು ವೈದ್ಯರು ರ್ಯಾಲಿಯಲ್ಲಿ ಭಾಗವಹಿಸಿದರು. ಇದೇ ವೇಳೆ ಪ್ರತಿಭಟನಾಕಾರರ ಮೇಲೆ ಸೇನೆ ನಡೆಸಿದ ಗುಂಡು ಹಾರಾಟದಲ್ಲಿ 247 ಮಂದಿ ಹತರಾಗಿದ್ದಾರೆ. ಇದೇ ವೇಳೆ ಮ್ಯಾನ್ಮಾರ್ ಸೇನೆಗೆ ಅಕ್ಕಿ ಕೊಟ್ಟಿಲ್ಲ ಎಂದು ಥಾಯ್ಲೆಂಡ್ ತಿಳಿಸಿದೆ.

ಸೇನೆ ದೇಶದಲ್ಲಿ ಅಕ್ರಮ ಮುಂದುವರಿಸುತ್ತಿರುವ ಪರಿಸ್ಥಿತಿಯಲ್ಲಿ ತಾಯ್ಲೆಂಡ್ ವಿರುದ್ಧ ಆರೋಪ ಎದ್ದು ಬಂದಿತ್ತು. 700 ಗೋಣಿ ಅಕ್ಕಿ ಮ್ಯಾನ್ಮಾರ್ ಸೇನೆಗೆ ತಾಯ್ಲೆಂಡ್ ವಿತರಣೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿತ್ತು.

ಸಹಾಯ ಮಾಡಬೇಕೆಂದು ಸೇನೆ ಈವರೆಗೆ ನಮ್ಮೊಂದಿಗೆ ಸಂಪರ್ಕಿಸಿಲ್ಲ. ಗಡಿಯಾಚೆ ಹೋಗುವ ಯಾವ ಆಹಾರ ವಸ್ತುವು ಅದು ವ್ಯಾಪಾರದ ಭಾಗವಾಗಿದೆ. ಈ ಹಿಂದೆ ಮ್ಯಾನ್ಮಾರಿನ ರಕ್ತಹರಿಸುವಿಕೆಗೆ ಥಾಯ್ಲೆಂಡ್ ಆತಂಕ ವ್ಯಕ್ತಪಡಿಸಿತ್ತು. ಮ್ಯಾನ್ಮಾರಿನ ಪೂರ್ವ ಗಡಿಯ ಆರ್ಮಿ ಯುನಿಟ್‍ಗೆ ಥಾಯ್ ಸೇನೆ 700 ಗೋಣಿ ಅಕ್ಕಿ ನೀಡಿದೆ ಎಂದು ಥಾಯ್ ಮಾಧ್ಯಮಗಳು ವರದಿ ಮಾಡಿದ್ದವು