ಕೋವಿಡ್ ನಿಯಮ ಉಲ್ಲಂಘಿಸಿ ವಾಯು ವಿಹಾರ: ನಾಯಿ ಮತ್ತು ಅದರ ಮಾಲಕನ ಬಂಧನ

0
356

ಸನ್ಮಾರ್ಗ ವಾರ್ತೆ

ಇಂದೋರ್: ಮಧ್ಯಪ್ರದೇಶದ ಇಂದೋರಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ನಾಯಿ ಮತ್ತು ನಾಯಿಯ ಒಡೆಯನನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಇಂದೋರ್ ನ ಪಲೇಸಿಯ ಎಂಬಲ್ಲಿ ಘಟನೆ ನಡೆದಿದೆ. ಕರ್ಫ್ಯೂ ಉಲ್ಲಂಘಿಸಿ ನಾಯಿಯನ್ನು ವ್ಯಕ್ತಿಯೊಬ್ಬ ರಸ್ತೆಯಲ್ಲಿ ಕರೆದುಕೊಂಡು ವಾಯು ವಿಹಾರಕ್ಕೆ ಹೋಗುತ್ತಿದ್ದ. ಅಲ್ಲಿಗೆ ಬಂದ ಪೊಲೀಸರು ವ್ಯಕ್ತಿಯನ್ನು ಸೆರೆ ಹಿಡಿದರು.

ವ್ಯಕ್ತಿ ಉದ್ಯಮಿಯಾಗಿದ್ದು, ನಾಯಿಯನ್ನು ನಡೆದಾಡಿಸಲು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರೂ ಪೊಲೀಸರು ಕೊರೊನ ಪ್ರೊಟೊ ಕಾಲ್ ಉಲ್ಲಂಘಿಸಿದ್ದಕ್ಕಾಗಿ ನಾಯಿಯನ್ನು ಮತ್ತು ಉದ್ಯಮಿಯನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ ಎಂದು ವರದಿಯಾಗಿದೆ. ನಾಯಿಯೊಂದಿಗೆ ಮಾಲಕನನ್ನು ಬಂಧಿಸಿದ್ದರ ವಿರುದ್ಧ ಪ್ರಾಣಿ ಸಂರಕ್ಷಣೆ ಕೆಲಸ ಮಾಡುವವರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ಮಾಡಿದ್ದಾರೆ.