ಹೊಸದಿಲ್ಲಿ,ಮೇ 10: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸುತ್ತಿದ್ದ ವೇಳೆ ತೆರೆದ ಜೀಪ್ನ ಬಾನೆಟ್ ಏರಿ ಅವರಿಗೆ ಕಪಾಲ ಮೋಕ್ಷ ಮಾಡಿದ ವ್ಯಕ್ತಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ. ಹೀಗೇಕೆ ಮಾಡಿದೆ ಎಂದು ಗೊತ್ತಾಗುತ್ತಿಲ್ಲ. ಜೈಲಿನಲ್ಲಿರುವಾಗ ಅಂದು ತೋರಿದ ವರ್ತನೆಗೆ ಪಶ್ಚಾತ್ತಾಪ ಪಟ್ಟೆ ಎಂದು ಆತ ಹೇಳಿಕೊಂಡಿದ್ದಾನೆ. ಕಳೆದ ವಾರ ರೋಡ್ ಶೋ ವೇಳೆ ಕೇಜ್ರಿವಾಲ್ರ ಮುಖಕ್ಕೆ ಸುರೇಶ್ ಎಂಬಾತ ಹೊಡೆದಿದ್ದು ಕೂಡಲೇ ಆಮ್ ಆದ್ಮಿ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆಮ್ ಆದ್ಮಿ ನಾಯಕರ ವರ್ತನೆಯಲ್ಲಿ ಅಸಮಾಧಾನಗೊಂಡು ಕೇಜ್ರಿವಾಲ್ಗೆ ಸುರೇಶ್ ಹಲ್ಲೆ ನಡೆಸಿದ್ದನೆಂದು ಪೊಲೀಸರು ಹೇಳಿದದರು. ಸುರೇಶ್ಗೆ ಯಾವುದೇ ರಾಜಕೀಯ ಪಾರ್ಟಿಯೊಂದಿಗೂ ಸಂಬಂಧವಿಲ್ಲ ಎನ್ನಲಾಗಿದೆ. ‘ನನಗೆ ಯಾವ ಪಾರ್ಟಿಯೊಂದಿಗೂ ಸಂಬಂಧವಿಲ್ಲ. ಹೀಗೆ ಮಾಡಬೇಕೆಂದು ಯಾರೂ ಹೇಳಲೂ ಇಲ್ಲ. ಪೊಲೀಸರು ಗೌರವದಿಂದ ನಡೆಸಿಕೊಂಡರು. ನಾನು ಮಾಡಿದದು ಸರಿಯಲ್ಲ ಎಂದು ಅವರು ಹೇಳಿದ್ದಾರೆ ಎಂದು ಸುರೇಶ್ ಹೇಳಿದ್ದಾನೆ.












