ನೀವು ದಿಢೀರನೆ ಜಾತ್ಯಾತೀತವಾದಿಯಾದಿರೋ ಎಂದ ರಾಜ್ಯಪಾಲರು; ಹಿಂದುತ್ವದ ಬಗ್ಗೆ ತನಗೆ ನಿಮ್ಮಿಂದ ಸರ್ಟಿಫಿಕೇಟ್ ಬೇಕಿಲ್ಲ ಎಂದ ಉದ್ಧವ್ ಠಾಕ್ರೆ

0
528

ಮಹಾರಾಷ್ಟ್ರದಲ್ಲಿ ರಾಜ್ಯಪಾಲರು-ಮುಖ್ಯಮಂತ್ರಿ ನಡುವೆ ಜಟಾಪಟಿ

ಮುಂಬೈ,ಅ.13:ಮಹಾರಾಷ್ಟ್ರದಲ್ಲಿ ದೇವಸ್ಥಾನವನ್ನು ಸಾರ್ವಜನಿಕರಿಗೆ ತೆರೆಯುವ ಬಗ್ಗೆ ರಾಜ್ಯಪಾಲರಾದ ಭಗತ್ ಸಿಂಗ್ ಕೊಶಿಯಾರಿಯವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಚುಚ್ಚುವ ಪತ್ರ ಬರೆದಿದ್ದು ಅಷ್ಟೇ ಖಾರವಾಗಿ ಉದ್ದವ್ ಠಾಕ್ರೆ ರಾಜ್ಯಪಾಲರಿಗೆ ಮರು ಉತ್ತರ ನೀಡಿದ್ದಾರೆ.

ರಾಜ್ಯದಲ್ಲಿ ಬಾರ್‌ಗಳು, ಬೀಚುಗಳು, ರೆಸ್ಟೋರೆಂಟುಗಳು ತೆರೆದಿವೆ, ದೇವಸ್ಥಾನವನ್ನೇಕೆ ತೆರೆಯುತ್ತಿಲ್ಲ? ನೀವೇನು ದಿಢೀರ್ ಜಾತ್ಯತೀತವಾದಿಯಾದಿರೋ ಎಂದು ರಾಜ್ಯಪಾಲರು ಪತ್ರದಲ್ಲಿ ಪ್ರಶ್ನಿಸಿದ್ದರು.

ಮಹಾರಾಷ್ಟ್ರವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಹೇಳಿದವರನ್ನು ಮನೆಗೆ ಕರೆದು ಸ್ವಾಗತಿಸಲು ನನ್ನ ಹಿಂದುತ್ವ ನನಗೆ ಅನುಮತಿಸುವುದಿಲ್ಲ ಎಂದು ಕಂಗನಾ ರಾಣಾವತ್ ಅವರ ಹೆಸರನ್ನು ಉಲ್ಲೇಖಿಸದೆ ಠಾಕ್ರೆ ಉತ್ತರದಲ್ಲಿ ಚುಚ್ಚಿದ್ದಾರೆ. ಈ ಮೊದಲು ರಾಜ್ಯಪಾಲರು ಕಂಗನಾರನ್ನು ತನ್ನ ಕಚೇರಿಯಲ್ಲಿ ಭೇಟಿಯಾಗಿದ್ದರು.

ದೇವಸ್ಥಾನವನ್ನು ತೆರೆಯುವುದು ಹಿಂದುತ್ವ, ತೆರೆದಿರುವುದು ಜಾತ್ಯತೀತವಾಗಿ ನೀವು ಕಾಣುತ್ತಿರುವಿರೋ? ನೀವು ಸಂವಿಧಾನದಲ್ಲಿ ವಿಶ್ವಾಸವಿರಿಸಿಲ್ಲವೇ ಎಂದು ಠಾಕ್ರೆ ಮರು ಪ್ರಶ್ನಿಸಿದ್ದಾರೆ.

ಈ ಕೊರೋನ ಸಂದರ್ಭದಲ್ಲಿ ತನ್ನ ಆದ್ಯತೆ ಜನರ ಸುರಕ್ಷತೆ ಎಂದೂ ಅವರು ಹೇಳಿದ್ದಾರೆ.