ಜಾನ್ಸನ್ & ಜಾನ್ಸನ್ ಕೊರೋನ ವ್ಯಾಕ್ಸಿನ್ ಪರೀಕ್ಷೆ ಸ್ಥಗಿತ

0
419

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.13: ಕೊರೋನ ಪ್ರತಿರೋಧ ವ್ಯಾಕ್ಸಿನ್ ಪರೀಕ್ಷೆಯನ್ನು ಜಾನ್ಸನ್ ಆಂಡ್ ಜಾನ್ಸನ್ ಸ್ಥಗಿತಗೊಳಿಸಿದೆ. ವ್ಯಾಕ್ಸಿನ್ ಪರೀಕ್ಷೆಯ ವೇಳೆ ಒಬ್ಬರಲ್ಲಿ ಅಡ್ಡಪರಿಣಾಮ ಕಂಡು ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ.

ವ್ಯಾಕ್ಸಿನ್ ಪಡೆದ ಬಳಿಕ ವ್ಯಕ್ತಿಯ ಆರೋಗ್ಯ ಸ್ಥಿತಿ ಕೆಟ್ಟು ಹೋಗಿತ್ತು. ಈ ವ್ಯಕ್ತಿಗೆ ಯಾವ ರೋಗ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ವ್ಯಾಕ್ಸಿನ್‍ಗಳನ್ನು ಮೊದಲು ಕೋತಿಗಳಲ್ಲಿ ಪರೀಕ್ಷಿಸಲಾಗಿತ್ತು. ಸೆಪ್ಟಂಬರ್ 23ರಿಂದ ಜಾನ್ಸನ್ ಆಂಡ್ ಜಾನ್ಸನ್ ಮನುಷ್ಯರಲ್ಲಿ ವ್ಯಾಕ್ಸಿನ್ ಪರೀಕ್ಷೆಯನ್ನು ಆರಂಭಿಸಿದೆ. ಕೊನೆಯ ಹಂತದ ಪರೀಕ್ಷೆಯಲ್ಲಿ ಅಮೆರಿಕ ಸಹಿತ 60,000 ಮಂದಿ ಭಾಗಿಯಾಗಲಿದ್ದಾರೆ.

ಅರ್ಜೆಂಟೀನ, ಬ್ರೆಝಿಲ್, ಚಿಲಿ, ಕೊಲೊಂಬಿಯ, ಮೆಕ್ಸಿಕೊ, ಪೆರು, ದಕ್ಷಿಣಾಫ್ರಿಕ ಮೊದಲಾದ ದೇಶದಲ್ಲಿ ಜಾನ್ಸನ್ ಆಂಡ್ ಜಾನ್ಸನ್‍ನ ಕೊರೋನ ಪ್ರತಿರೋಧ ವ್ಯಾಕ್ಸಿನ್ ಪರೀಕ್ಷೆ ನಡೆಯುತ್ತಿದೆ.