ಸನ್ಮಾರ್ಗ ವಾರ್ತೆ
ನವದೆಹಲಿ:ಹಲಾಲ್ ಪದ್ಧತಿಯ ಮೂಲಕ ಪ್ರಾಣಿಗಳ ವಧೆ ನಡೆಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನಿಮ್ಮ ಅರ್ಜಿ ದುರುದ್ದೇಶದಿಂದ ಕೂಡಿದೆ. ಯಾರು ಮಾಂಸಾಹಾರಿಯಾಗಬೇಕು, ಯಾರು ಸಸ್ಯಾಹಾರಿ ಆಗಬೇಕು ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಹಲಾಲ್ ಒಂದು ಪದ್ಧತಿ. ಬೇರೆ ಪದ್ಧತಿಗಳೂ ಪ್ರಾಣಿ ವಧೆಗೆ ಸಂಬಂಧಿಸಿ ಇದೆ. ಇದು ಯಾಕೆ ಸಮಸ್ಯೆಯಾಗುತ್ತದೆ ಎಂದು ಸುಪ್ರೀಂ ಕೋರ್ಟು ಅರ್ಜಿದಾರರನ್ನು ಖಾರವಾಗಿ ಪ್ರಶ್ನಿಸಿದೆ.
ಅರ್ಜಿದಾರರು ಹಲಾಲ್ ಪದ್ಧತಿ ಬಹಳ ನೋವು ತರುತ್ತದೆ ಮತ್ತು ರಕ್ತದ ಕೊನೆಯ ಹನಿ ಹೊರಬರುವ ತನಕ ಪ್ರಾಣಿ ಜೀವಂತವಾಗಿರಬೇಕಿದೆ. ಇದು ಮಾನವೀಯತೆಗೆ ವಿರುದ್ದ ಎಂದು ವಾದಿಸಿದ್ದರು.












