ಸನ್ಮಾರ್ಗ ವಾರ್ತೆ
2027 ಜನವರಿ ಒಂದರಿಂದ ಯುಎಇಯಲ್ಲಿ ಹೊಸ ಪರವಾನಿಗೆ ನಿಯಮ ಜಾರಿಗೆ ಬರಲಿದೆ. ಇದರ ಪ್ರಕಾರ ಶೇಕಡ 75% ದಷ್ಟು ಅಂಕ ಗಳಿಸಿದರೂ ಪರವಾನಿಗೆ ಪಡೆಯಲು ಸಾಕಾಗುವುದಿಲ್ಲ. ಏಕೆಂದರೆ ಅಪಾಯಕಾರಿ ಚಾಲನಾ ದೋಷಗಳು ಅಥವಾ ಪರೀಕ್ಷಕರ ಹಸ್ತಕ್ಷೇಪದ ಅಗತ್ಯವಿರುವ ಸಂದರ್ಭಗಳು ಪರವಾನಿಗೆ ನೀಡದೆ ಇರುವುದಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಈಗಿರುವ ನಿಯಮದಂತೆ ಉತ್ತೀರ್ಣರಾಗಲು ಕನಿಷ್ಠ 75 ಶೇಕಡ ಅಂಕಗಳು ಸಾಕಾಗುತ್ತದೆ. ಆದರೆ ಹೊಸ ನಿಯಮಗಳ ಪ್ರಕಾರ.
ವಾಹನದ ಬಾಡಿ ಅಥವಾ ಚಕ್ರಗಳು ಗೊತ್ತು ಪಡಿಸಿದ ತಡೆಗೋಡೆ ಅಥವಾ ಗಡಿಗಳಿಗೆ ಸ್ಪರ್ಶಿಸಿದರೆ ಪರವಾನಿಗೆ ನೀಡದೇ ಇರುವುದಕ್ಕೆ ಕಾರಣವಾಗಿ ಪರಿಗಣಿಸಬಹುದು. ವಾಹನವನ್ನು ಸ್ಟಾರ್ಟ್ ಮಾಡುವಾಗ ನಿಯಂತ್ರಣ ಕಳೆದುಕೊಂಡರೆ ಪರವಾನಿಗೆಗೆ ಸಮಸ್ಯೆ ಎದುರಾಗಬಹುದು.ಗೇರ್ ಬದಲಾಯಿಸುವಾಗ ತಪ್ಪು ಮಾಡಿದ್ರೆ ಮತ್ತು ಗೊತ್ತುಪಡಿಸಿದ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಮಾಡಲು ವಿಫಲವಾದರೂ ಪರವಾನಿಗೆ ಸಿಗದಿರುವುದಕ್ಕೆ ಕಾರಣವಾಗಬಹುದು.
ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವುದು ಅಥವಾ ಸಂಕೇತಗಳನ್ನು ಉಲ್ಲಂಘಿಸುವುದು ಕೂಡ ಪರವಾನಿಗೆ ತಡೆಹಿಡಿಯುವುದಕ್ಕೆ ಕಾರಣವಾಗಬಹುದು. ರೈಡ್ ಮಾಡುವಾಗ ಮೋಟರ್ ಸೈಕಲ್ ಸವಾರ ತನ್ನ ಪಾದವನ್ನು ನೆಲಕ್ಕೆ ಸ್ಪರ್ಶಿಸಿದರೂ ಪರವಾನಿಗೆ ಸಿಗದೇ ಇರುವುದಕ್ಕೆ ಇದನ್ನು ಕಾರಣವಾಗಿ ಪರಿಗಣಿಸಬಹುದು ಎಂದು ತಿಳಿಸಲಾಗಿದೆ.












