ರೈತರಿಗೆ ಅಪಮಾನ: ನಟಿ ಕಂಗನಾಗೆ ಮತ್ತೊಮ್ಮೆ ನೋಟಿಸ್

0
433

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.4: ರೈತರ ಹೋರಾಟದಲ್ಲಿ ಭಾಗವಹಿಸುವ ವಯೋವೃದ್ಧ ವ್ಯಕ್ತಿಗಳನ್ನು ಅಪಮಾನಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವೀಟ್ ಮಾಡಿದ ಬಾಲಿವುಡ್ ನಟಿ ಕಂಗನಾ ವಿರುದ್ಧ ಪುನಃ ಲಾಯರ್ ನೋಟಿಸ್ ಜಾರಿ ಮಾಡಲಾಗಿದೆ. ದಿಲ್ಲಿಯ ಸಿಖ್ಖ್ ಗುರುದ್ವಾರದ ಮ್ಯಾನೇಜ್ಮೆಂಟ್ ಕಮಿಟಿ (ಡಿಎಸ್‍ಜಿಎಂಸಿ) ಸದಸ್ಯ ಜಸ್‍ಮೈನ್ ಸಿಂಗ್ ನೊನಿಯವರು ನೋಟಿಸು ಕಳುಹಿಸಿದ್ದಾರೆ.

ರೈತ ಹೋರಾಟಕ್ಕೆ ಸಂಬಂಧಿಸಿದ ಟ್ವೀಟ್ ವಿರುದ್ಧ ಎರಡನೇ ಬಾರಿ ಕಂಗನಾರಿಗೆ ವಕೀಲರಿಂದ ನೋಟಿಸು ಕಳುಹಿಸಿಕೊಡಲಾಗಿದೆ. ರೈತ ಪ್ರತಿಭಟನೆಯಲ್ಲಿ ಭಾಗಿಯಾದ ಹಿರಿಯ ಮಹಿಳೆಯನ್ನು ಶಾಹೀನ್ ಬಾಗ್ ದಾದಿ ಎಂದು ತಪ್ಪಾಗಿ ಕಂಗನಾ ಆಕ್ಷೇಪಿಸಿದ್ದರು. 100 ರೂಪಾಯಿ ಕೊಟ್ಟರೆ ಹೋರಾಟಕ್ಕೆ ಬರುವ ಅಜ್ಜಿಯೆಂದು ಹಿರಿಯ ಮಹಿಳೆಯನ್ನು ಕಂಗನಾ ಹೇಳಿದ್ದರು. ಆದರೆ ಫೋಟೋದಲ್ಲಿರುವ ವೃದ್ಧ ಮಹಿಳೆಯು ಬೇರೊಬ್ಬರು ಎಂಬುದು ವಿವಾದವಾದ ಬಳಿಕ ಟ್ವೀಟನ್ನು ಡಿಲಿಟ್ ಮಾಡಿದ್ದರು.

ತನ್ನ ಮನೆ ಪರಿಸರವನ್ನು ಈ ಹಿಂದೆ ಸರಕಾರ ಕೆಡವಿದಾಗ ಮೂಲಭೂತಹಕ್ಕು ಉಲ್ಲಂಘನೆಯೆಂದು ಹೇಳಿ ಅಭಿಮಾನಿಗಳ ಬೆಂಬಲ ಗಳಿಸಲು ಕಂಗನಾ ಸಾಮಾಜಿಕ ಮಾಧ್ಯವನ್ನು ಬಳಸಿದ್ದರು ಎಂದು ವಕೀಲರ ನೋಟಿಸು ತಿಳಿಸುತ್ತಿದೆ.

ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಭಾರತದ ಸಂವಿಧಾನ ಕೊಡುತ್ತಿದೆ. ರೈತರು ಈ ಹಕ್ಕಿನ ಭಾಗವಾಗಿದ್ದಾರೆ ಅವರನ್ನು ಅಪಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂದು ನೋಟಿಸಿನಲ್ಲಿ ತಿಳಿಸಿದೆ. ಬಿಲ್ಕಿಸ್ ಬಾನೂರನ್ನು ಅಪಮಾನಿಸಿದ ರೀತಿಯಲ್ಲಿ ತಪ್ಪಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಕಳೆದ ತಿಂಗಳು 30ನೆ ತಾರೀಕಿಗೆ ವಕೀಲ ಹರ್‍ಕಂ ಸಿಂಗ್ ಮೂಲಕ ಕಂಗನಾಗೆ ನೋಟಿಸು ಕಳುಹಿಸಿದ್ದರು.