ಕ್ರಿಮಿನಲ್‌ ರಾಜಕಾರಣಿಗಳಿಗೆ ಚುನಾವಣೆಯಿಂದ ಜೀವನ ಪರ್ಯಂತ ನಿಷೇಧ ಬೇಡ- ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಸರಕಾರ

0
434

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.4: ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷಿಸಲಾಗಿರುವ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಅಜೀವಾನಂತ ನಿಷೇಧ ಹೇರಬೇಕೆಂದು ಆಗ್ರಹಿಸಿ, ಸುಪ್ರೀಂ ಕೋರ್ಟ್ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ್  ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಬೇಡಿಕೆಯನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ವಿರೋಧಿಸಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಎರಡು ವರ್ಷಕ್ಕೂ ಹೆಚ್ಚು ಶಿಕ್ಷಿಸಲ್ಪಟ್ಟ ವ್ಯಕ್ತಿಗಳಿಗೆ ಈಗ ಆರು ವರ್ಷ ನಿಷೇಧ ಇದೆ. ಅದನ್ನು ಜೀವನ ಪರ್ಯಂತ ನಿಷೇಧವಾಗಿ ಬದಲಾಯಿಸಬೇಕೆಂಬ ಬೇಡಿಕೆಯನ್ನು ಚುನಾವಣಾ ಆಯೋಗ ಬೆಂಬಲಿಸಿತ್ತು. ಆದರೆ, ಕೇಂದ್ರ ಸರಕಾರ ಈ ಬೇಡಿಕೆಯನ್ನು ವಿರೋಧಿಸಿದೆ.

‘ಚುನಾವಣಾ ಆಯೋಗದ ಬೆಂಬಲ ಮತ್ತು ಈ ಬೇಡಿಕೆ ಸಂವಿಧಾನ ವಿರೋಧಿ’ ಎಂಬುದಾಗಿ ಸರಕಾರ ಸುಪ್ರೀಂ ಕೋರ್ಟಿನಲ್ಲಿ ವಿವರಿಸಿತು. ಚುನಾಯಿತ ಜನಪ್ರತಿನಿಧಿಗಳು ಸರಕಾರಿ ನೌಕರರು. ಸಾರ್ವಜನಿಕವಾಗಿ ದೇಶ ಮತ್ತು ವಿಶೇಷತಃ ಕ್ಷೇತ್ರಗಳಲ್ಲಿ ಜನಸೇವೆ ನಡೆಸಲು ಪ್ರತಿಜ್ಞೆ ಕೈಗೊಂಡವರು ಎಂದು ಕೇಂದ್ರ ಸರಕಾರ ಸಲ್ಲಿಸಿದ ಅಫಿದಾವಿತ್‍ನಲ್ಲಿ ಉತ್ತರಿಸಿದೆ.