ಆರ್ಥಿಕ ಬಿಕ್ಕಟ್ಟು: ಬ್ಯಾಂಕ್‍ ಸಾಲದ ಕುಣಿಕೆಯಲ್ಲಿರುವ ರೈತರು, ಉದ್ಯಮಿಗಳು ಸಂಕಷ್ಟದಲ್ಲಿ

0
575

ಸನ್ಮಾಗ ವಾರ್ತೆ

ತಿರುವನಂತಪುರಂ,ಅ.2: ದೇಶದಲ್ಲಿ 1.37 ಲಕ್ಷ ರೈತರು ಹಾಗೂ 1.17 ಲಕ್ಷ ಸಣ್ಣ ಉದ್ಯಮಿಗಳು ಬ್ಯಾಂಕ್‍ ಸಾಲದ ಕುಣಿಕೆಯಲ್ಲಿ ನರಳುತ್ತಿದ್ದಾರೆ. 1,37,191 ರೈತರು 2404 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. 1,17,497 ಸಣ್ಣ ಉದ್ಯಮಿಗಳು 4643 ಕೋಟಿ ರೂಪಾಯಿ ಸಾಲ ಮರುಪಾವತಿಸದವರ ಪಟ್ಟಿಯಲ್ಲಿದ್ದಾರೆ. ಗುರುವಾರ ರಾಜ್ಯಮಟ್ಟದ ಬ್ಯಾಂಕರ್ಸ್ ಸಮತಿಯಲ್ಲಿ ಸಲ್ಲಿಸಲಾದ ವರದಿಯಲ್ಲಿ ಈ ವಿವರಗಳು ಬಹಿರಂಗವಾಗಿವೆ.

ದೇಶದ ಬ್ಯಾಂಕುಗಳಲ್ಲಿ ಒಟ್ಟು13,665 ಕೋಟಿ ರೂಪಾಯಿ ಪಾವತಿಯಾಗದ ಸಾಲ ಇದೆ. ಐದು ಲಕ್ಷ ಮಂದಿ ಇದನ್ನು ತೆಗೆದಿದ್ದಾರೆ. ಆದ್ಯತಾ ವಲಯದಲ್ಲಿ 10,080 ಕೋಟಿ(3,86,923 ಮಂದಿ) ಹಾಗೂ ಆದ್ಯತೇತರ ವಲಯದಲ್ಲಿ 3586 ಕೋಟಿ ರೂಪಾಯಿ (1,20,246 ಖಾತೆಗಳು) ಸಾಲ ಪಾವತಿಯಾಗದ ಸಾಲಗಳಾಗಿವೆ. ಶಿಕ್ಷಣ ಸಾಲ ತೆಗೆದವರು ಮರುಪಾವತಿ ಮಾಡಲಾಗದೆ ಕಷ್ಟದಲ್ಲಿದ್ದಾರೆ. 59965 ಮಂದಿ 1567 ಕೋಟಿ ರೂಪಾಯಿ ವಿದ್ಯಾಭ್ಯಾಸ ಸಾಲ ಮಾಡಿದ್ದಾರೆ. ಇದು ಪಾವತಿಯಾಗದ ಲೀಸ್ಟ್‌ನಲ್ಲಿದೆ. 758 ಕೋಟಿರೂಪಾಯಿ ಮನೆಕಟ್ಟಲು ತೆಗೆದ ಪಾವತಿಯಾಗದ ಸಾಲದಲ್ಲಿ 15,557 ಮಂದಿ ಪಾವತಿಸಿದ್ದಾರೆ.

ರಫ್ತು ಕ್ರೆಡಿಟ್ ಹತ್ತೊಂಬತ್ತು ಕೋಟಿ, ರೆವೆನ್ಯೂ ಬಿಲ್ ಎನರ್ಜಿ-0.01 ಕೋಟಿ ರೂಪಾಯಿ ಸಾಮಾಜಿಕ ಮೂಲಸೌಕರ್ಯಕ್ಕೆ ಒಂದು ಕೋಟಿ ರೂಪಾಯಿ ಆದ್ಯತಾ ವಲಯದಲ್ಲಿ ಇತರ ಸಾಲಗಳು, ವಸತಿ ನಿರ್ಮಾಣ ವಲಯದಲ್ಲಿ ಒಂದು ವರ್ಷದಲ್ಲಿ ಸಂಭವಿಸಿದ ಕೊರತೆ ನಡುಕ ಹುಟ್ಟಿಸಿದೆ. 2018 ಜೂನ್‍ನಲ್ಲಿ 33253 ಕೋಟಿ ರೂಪಾಯಿ ಬ್ಯಾಂಕುಗಳು ವಸತಿ ಸಾಲ ನೀಡಿದ್ದವು. 2019ಜೂನ್‍ನಲ್ಲಿ 28,426 ಕೋಟಿಗೇರಿಕೆಯಾಗಿದೆ. 4828ಕೋಟಿ ರೂಪಾಯಿ ಕೊರತೆ, ಹಿಂದೆ ಎಲ್ಲ ವರ್ಷ ವಸತಿ ಸಾಲ ಮೊತ್ತದಲ್ಲಿ ಹೆಚ್ಚಳವಾಗಿತ್ತು. ವಸತಿ ಸಾಲದಲ್ಲಿ ಪಾವತಿಯಾದ ಸಾಲ.2.76 ಕೋಟಿ ರೂಪಾಯಿ ಆಗಿದೆ.

ಶಿಕ್ಷಣ ಸಾಲದಲ್ಲಿ ಜೂನ್‍ನಲ್ಲಿ 10,083ಕೋಟಿಯಾಗಿ ಹೆಚ್ಚಳವಾಗಿದೆ. 2018ಜೂನ್‍ನಲ್ಲಿ 9982 ಆಯಿತು. ಶಿಕ್ಷಣ ಸಾಲದಲ್ಲಿ ಶೆ. 80 ಸಾರ್ವಜನಿಕ ವಲಯ ಬ್ಯಾಂಕ್‍ಗಳಲ್ಲಿ ಸಾಲ ಮಾಡಲಾಗಿದೆ. ಖಾಸಗಿ ಬ್ಯಾಂಕುಗಳು ಶೇ.13 ಮಾತ್ರ ಶಿಕ್ಷಣ ಸಾಲ ನೀಡಿದೆ.