ಸನ್ಮಾರ್ಗ ವಾರ್ತೆ
ಮುಂಬೈ: ಕಪ್ಪು ಹಣ ಬಿಳಿ ಮಾಡಿದ ಪ್ರಕರಣದಲ್ಲಿ ಶಿವಸೇನೆ ವಕ್ತಾರ ಸಂಜಯ್ ರಾವುತ್ರ ಪತ್ನಿ ಸಹಿತ ಮೂವರ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿದೆ. ರಾವುತ್ರ ಪತ್ನಿ ವರ್ಷ ರಾವುತ್, ರಾವುತ್ ಸಂಬಂಧಿ ಉದ್ಯಮಿ ಪ್ರವೀಣ್ ರಾವುತ್ , ಸ್ವಪ್ನ ಪಾಟ್ಕರ್ರಿಗೆ ಸೇರಿದ 11.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಇಡಿ ವಶಪಡಿಸಿಕೊಂಡಿದೆ.
ವರ್ಷ ರಾವುತ್ರ ದಾದರಿನ ಫ್ಲಾಟ್, ಸ್ವಪ್ನ ಪಾಟ್ಕರ್ರ ಪಾಲುದಾರಿಕೆಯ ಅಲಿಬಾಗಿನ ಜಮೀನು, ಪ್ರವೀಣ್ ರಾವುತ್ರ ಜಮೀನು ಮುಟ್ಟುಗೋಲಿಗೊಳಗಾಗಿದೆ. ಪ್ರಕರಣದಲ್ಲಿ ಪ್ರವೀಣ್ ರಾವುತ್ ಬಂಧನದಲ್ಲಿದ್ದಾರೆ. ಪ್ರವೀಣ್ ರಾವುತ್ರ ಆಶಿಷ್ ಕಂಟ್ರಕ್ಷನ್ 100 ಕೋಟಿ ರೂಪಾಯಿ ಲಂಚ ಪಡೆದುಕೊಂಡಿರುವುದನ್ನು ಇಡಿ ಪತ್ತೆ ಹಚ್ಚಿದೆ ಎನ್ನಲಾಗುತ್ತಿದೆ.
ಇದೇ ವೇಳೆ ಹಣವನ್ನು ಸಂಜಯ್ ರಾವುತ್ರ ಕುಟುಂಬದ ಸಣ್ಣ ಉದ್ಯಮಗಳಿಗೆ ಹಂಚಲಾಗಿದೆ ಎಂದು ಇಡಿ ಆರೋಪಿಸಿದ್ದು, ಈ ಹಿಂದೆಯೆ ಮಹಾರಾಷ್ಟ್ರದ ಮೈತ್ರಿ ಸರಕಾರ ಕೆಡವಲು ತನ್ನಲ್ಲಿ ಸಹಾಯಕೋರಿದ್ದು ಅದನ್ನು ತಿರಸ್ಕರಿಸಿದರೆ ಭಾರೀ ಬೆಲೆ ತೆರಬೇಕಾದೀತೆಂದು ಬಿಜೆಪಿ ನಾಯಕರು ಹೇಳಿದ್ದನ್ನು ಈ ಎಲ್ಲ ಕಾರ್ಯಾಚರಣೆ ಮುಂಚೆಯೇ ಉಪರಾಷ್ಟ್ರಪತಿಯವರಿಗೂ ಸಂಜಯ್ ರಾವುತ್ ದೂರು ನೀಡಿ ತಿಳಿಸಿದ್ದರು.












